ಜಿಲ್ಲೆ

ಕಮ್ಯುನಿಟಿ ಸ್ಕಿಲ್ ಪಾರ್ಕ್‌ನಲ್ಲಿ ಉದ್ಯೋಗ ಮೇಳ

ಸೌಮ್ಯ ಆರ್

ಕಾಸರಗೋಡು: ಉನ್ನತ ಶಿಕ್ಷಣ ಇಲಾಖೆ ವಿಜ್ಞಾನ ಕೇರಳ ಯೋಜನೆ ಅಂಗವಾಗಿ ಅಸಾಪ್ ಕೇರಳ, ಲಿಂಕ್ ಅಕಾಡೆಮಿ ಜಂಟಿಯಾಗಿ ಕಾಸರಗೋಡು ಅಸಾಪ್ ಕಮ್ಯುನಿಟಿ ಸ್ಕಿಲ್ ಪಾರ್ಕ್‌ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಯಿತು.

ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಅಸಾಪ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಜುಬಿನ್ ಸಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರ ವ್ಯವಸ್ಥಾಪಕಿ ರೇಖಾ ಆರ್ ಭಾಗವಹಿಸಿದ್ದರು. 200 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. 20 ಕಂಪನಿಗಳಲ್ಲಿ 400 ಉದ್ಯೋಗಾವಕಾಶ ಇತ್ತು. ಲಿಂಕ್ ಅಕಾಡೆಮಿ ತರಬೇತಿ, ಅಭಿವೃದ್ಧಿ ವ್ಯವಹಾರ ವ್ಯವಸ್ಥಾಪಕ ಸಜೇಶ್ ನಾಯರ್, ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಕಾಸರಗೋಡು ಅಧ್ಯಕ್ಷ ಶ್ಯಾಮಪ್ರಸಾದ್, ಅಸಾಪ್ ಕಾಸರಗೋಡು ಕಮ್ಯುನಿಟಿ ಸ್ಕಿಲ್ ಪಾರ್ಕ್ ಕಾರ್ಯನಿರ್ವಾಹಕ ಅಖಿಲ್ ಕೆ, ಲಿಂಕ್ ಅಕಾಡೆಮಿ ಪ್ಲೇಸ್‌ಮೆಂಟ್ ಮ್ಯಾನೇಜರ್ ಡೈಕ್ಸ್ ಡೇನಿಯಲ್ ಡೇವಿಡ್ ಮೊದಲಾದವರು ಉಪಸ್ಥಿತರಿದ್ದರು.