ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಕುಡಿವ ನೀರಿನ ಕೆರೆಗೆ ಶುಕ್ರವಾರ ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಭೇಟಿ ನೀಡಿ ವೀಕ್ಷಿಸಿದರು. ಸಿರವಾರ ತಾಪಂ ಇಒ ಶಶಿಧರ್ ಸ್ವಾಮಿ ಮಠದ್, ಗ್ರಾಪಂ ಅಧ್ಯಕ್ಷ ಸೂಗೂರಯ್ಯ ಸ್ವಾಮಿ ಹಿರೇಮಠ ಇತರರಿದ್ದರು. 
ಜಿಲ್ಲೆ

ಜೆಜೆಎಂ ಕಾಮಗಾರಿ ಬೇಗ ಪೂರ್ಣಗೊಳಿಸಿ

Kopala - Desk - Eraveni

ಸಿರವಾರ: ತಾಲೂಕಿನ ಹೊಕ್ರಾಣಿ ಗ್ರಾಮದ ಕುಡಿವ ನೀರಿನ ಕೆರೆ ಹಾಗೂ ಆರ್‌ಒ ಪ್ಲಾಂಟ್‌ಗೆ ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಜನರಿಗೆ ಕುಡಿವ ನೀರಿನ ಸೌಲಭ್ಯ ಒದಗಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ಹೊಕ್ರಾಣಿ ಕ್ರಾಸ್ ಹತ್ತಿರ ಒಣಮೆಣಸಿನಕಾಯಿ ಬೆಳೆದ ರೈತರ ಹೊಲದಲ್ಲಿ ಮೆಣಸಿನಕಾಯಿ ಬಿಡಿಸುವುದನ್ನು ಗಮನಿಸಿ, ಜನರಿಂದ ಕೆಲಸಕ್ಕಾಗಿ ಬೇಡಿಕೆ ಸಂಗ್ರಹಿಸಿ ಫಾರ್ಮ್ 6 ಭರ್ತಿ ಮಾಡಿ ಕೆಲಸ ನೀಡಬೇಕು.

ನರೇಗಾದಡಿ ಸಿಗುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳು, ಇತರ ಸೌಲಭ್ಯಗಳನ್ನು ಪಡೆಯಲು ಜನರಿಗೆ ಅರಿವು ಮೂಡಿಸಬೇಕು ಎಂದು ಪಿಡಿಒ ವಿಜಯಕುಮಾರ್‌ಗೆ ತಿಳಿಸಿದರು. ಸಿರವಾರ ತಾಪಂ ಇಒ ಶಶಿಧರ್ ಸ್ವಾಮಿ ಮಠದ್, ಗ್ರಾಪಂ ಅಧ್ಯಕ್ಷ ಸೂಗೂರಯ್ಯ ಸ್ವಾಮಿ ಹಿರೇಮಠ, ಸದಸ್ಯರಾದ ನಲ್ಲಾರೆಡ್ಡಿ, ಅಯ್ಯಳಪ್ಪ ಹಾಗೂ ದೇವಪ್ಪ ಇತರರಿದ್ದರು.