ಬೆಂಗಳೂರು: ಆಭರಣ ಸಮೃದ್ಧಿಯ ಸಂಕೇತವಾಗಿದೆ. ಚಿನ್ನಾಭರಣ ಖರೀದಿಸಿದರೆ ಕಷ್ಟದ ಕಾಲದಲ್ಲಿ ಅದು ನೆರವಿಗೆ ಬರಲಿದೆ ಎಂದು ನಟಿ ಅನು ಪ್ರಭಾಕರ್ ಹೇಳಿದ್ದಾರೆ.
ಜೆ.ಪಿ.ನಗರದ ಶಿವ ಬಾಲಯೋಗಿ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ಬೆಳ್ಳಿ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಆಭರಣದ ಜೊತೆ ಕೆಲವರು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿರುತ್ತಾರೆ. ಚಿನ್ನ ಖರೀದಿ ಒಂದು ರೀತಿಯಲ್ಲಿ ಉಳಿತಾಯವಿದ್ದಂತೆ. ಹೆಣ್ಣುಮಕ್ಕಳಿಗೆ ಆಭರಣ ಅತಿ ಇಷ್ಟವಾದ ವಸ್ತುವಾಗಿದೆ. ಇತ್ತೀಚಿನ ದಿನಗಳಲ್ಲಿ ಆಭರಣದ ಬೆಲೆ ಗಗನಮುಖಿಯಾಗುತ್ತಿದ್ದು, ಜನರು ತಮ್ಮ ಉಳಿತಾಯ ಹಣದಲ್ಲಿ ಹೆಚ್ಚಾಗಿ ಚಿನ್ನಭರಣ ಖರೀದಿಸುವಂತಾಗಬೇಕು. ಕಷ್ಟದ ಸಮಯದಲ್ಲಿ ನಮಗೆ ನೆರವಿಗೆ ಬರಲಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಭರಪೂರ ಮನರಂಜನೆ ಒದಗಿಸಿದವು. ಅವಧೂತ ಶ್ರೀ ವಿನಯ್ ಗುರೂಜಿ, ನಟಿ ನಿವಿಷ್ಕ ಪಾಟೀಲ್, ಮಂಗಳೂರು ಜುವೆಲ್ಸ್ನ ವಿಕ್ರಂ ಆಚಾರ್, ಹಿರಿಯ ಕಲಾವಿದ ಸುಂದರ ರಾಜ್ ಮತ್ತಿತರರಿದ್ದರು.