ಜಿಲ್ಲೆ

ಜೆಡಿಎಸ್​ಗೆ ಶಕ್ತಿ ತುಂಬಿದ್ರೆ ನಮಗೇ ಮಾರಕ, ಯಾವುದೇ ಕಾರಣಕ್ಕೂ ನಂಬುವಂತಿಲ್ಲ ಎಂದ ಸಚಿವ

arunakunigal

ಮೈಸೂರು: ಜೆಡಿಎಸ್‌ಗೆ ಶಕ್ತಿ ತುಂಬಿದ್ರೆ ಅದು ನಮಗೇ ಮಾರಕ. ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿವೈ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಭದ್ರವಾಗಿ ಕಟ್ಟೋದು ನನ್ನ ಸಂಕಲ್ಪ. ಈ ವಿಚಾರದ ಬಗ್ಗೆ ವರಿಷ್ಠರ ವೇದಿಕೆಯಲ್ಲಿ ಮಾತಾಡುತ್ತೇನೆ. ಜೆಡಿಎಸ್​ನವರು ಮಹಾಘಟಬಂಧನ್ ಮಾಡಿಕೊಂಡು ದೇಶ ಆಳಲು ಹೊರಟಿದ್ದರು. ಹಾಗಾಗಿ ಆ ಪಕ್ಷವನ್ನ ನಾವು ನಂಬುವಂತಿಲ್ಲ ಎಂದರು. ಇದನ್ನೂ ಓದಿರಿ ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

ಡಿಸ್ನಿಲ್ಯಾಂಡ್ ವಿಚಾರ ಇಲಾಖೆ ಮಟ್ಟದಲ್ಲಿ ಇನ್ನೂ ಜೀವಂತವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿನ ಯೋಜನೆಯೆಂದು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಮಗೆ ಪ್ರವಾಸೋದ್ಯಮದ ಬೆಳವಣಿಗೆ ಮುಖ್ಯ. ಯಾವ ಸರ್ಕಾರದ ಯೋಜನೆ ಎಂಬುದು ಮುಖ್ಯವಲ್ಲ. ಡಿಸ್ನಿಲ್ಯಾಂಡ್ ಯೋಜನೆ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ನೀರಾವರಿ ಸಚಿವರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯೋಗೇಶ್ವರ್​ ಹೇಳಿದರು.

ಮತ್ತೊಮ್ಮೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಿಪಿವೈ, ಕುಮಾರಸ್ವಾಮಿ ನನ್ನ ಬಗ್ಗೆ ವೈಯಕ್ತಿಕವಾಗಿ ಕೀಳಾಗಿ ಮಾತನಾಡುತ್ತಿದ್ದರು. ಈ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿದೆ. ಆದರೂ ಮುಂದುವರಿಸಿದರು. ನನಗೆ ತುಂಬಾ ಘಾಸಿ ಆಯ್ತು. ಅದೇ ಕಾರಣಕ್ಕೆ ನಾನು ಕೂಡ ಮಾತನಾಡಿದೆ. ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ಮಾಡುವುದು ತಪ್ಪು ಎಂದು ನನಗೂ ಗೊತ್ತಿದೆ ಎಂದರು.