ಜಿಲ್ಲೆ

ಕೃಷಿಕ ಹರೀಶ್‌ಗೆ ಜೆಸಿಐ ಸನ್ಮಾನ

ಇಂದಿರಾ ಎನ್ ಕೆ

ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅನ್ವಯ ಬಸ್ರೂರಿನ ಕೃಷಿಕ ಹರೀಶ್ ಅಡಿಗರನ್ನು ಅವರ ನಿವಾಸದಲ್ಲಿ ಕುಂದಾಪುರದ ವಕೀಲ ರವಿಕಿರಣ್ ಮುರ್ಡೇಶ್ವರ ಸನ್ಮಾನಿಸಿದರು. ವಿಕಾಸ್ ಹೆಗ್ಡೆ ಶುಭಹಾರೈಸಿದರು. ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಮ್ ಅಧ್ಯಕ್ಷತೆ ವಹಿಸಿದರು. ಜೆಸಿಐ ವಲಯ 15 ರ ವಲಯಾಧಿಕಾರಿ ಸುಮಾ ಆಚಾರ್, ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ನಾಗೇಶ್ ನಾವಡ, ವಿಜಯ ಭಂಡಾರಿ, ಉಪಾಧ್ಯಕ್ಷೆ ಸರೋಜಾ, ಲೇಡಿ ಜೇಸಿ ಅಧ್ಯಕ್ಷೆ ಶೈಲಾ ಲೂಯಿಸ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿರಣ್ ಜಾಲಾಡಿ ವಂದಿಸಿದರು.