ಹೆಬ್ರಿ: ಮಲ್ಲಿಗೆ ಕೃಷಿಯನ್ನು ಎಲ್ಲರೂ ಸರಿಯಾದ ಪಾಲನೆಯಿಂದ ಮಾಡಿದಾಗ ದಿನನಿತ್ಯದ ಆದಾಯ ಗಳಿಸಬಹುದು ಎಂದು ಚಾರದ ಪ್ರಗತಿಪರ ಮಲ್ಲಿಗೆ ಕೃಷಿಕ ಸತೀಶ್ ನಾಯ್ಕ್ ಹೇಳಿದರು.
ಹೆಬ್ರಿ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯದ ಎಳ್ಳಾರೆ ದೇವಸ್ಥಾನ ಬಳಿ ಮಲ್ಲಿಗೆ ಕೃಷಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಲ್ಲಿಗೆ ಕೃಷಿ ಮಾಹಿತಿ ನೀಡಿದರು.
ದಿನನಿತ್ಯದ ಆದಾಯಕ್ಕೆ ಮಲ್ಲಿಗೆ ಬಹಳ ಪೂರಕವಾಗಿದೆ. ರೈತರು ಹೆಚ್ಚು ಮಲ್ಲಿಗೆ ಕೃಷಿಯನ್ನು ಅಳವಡಿಸಿಕೊಂಡಾಗ ಆದಾಯ ಗಳಿಸಲು ಸಾಧ್ಯ ಎಂದು ಸತೀಶ್ ನಾಯ್ಕ ತಿಳಿಸಿದರು.
ಮಲ್ಲಿಗೆ ಗಿಡಗಳ ಆಯ್ಕೆ ನಾಟಿ, ನಿರ್ವಹಣೆ ಕುರಿತು ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಅಧ್ಯಕ್ಷ ್ರಾನ್ಸಿಸ್ ಡಿಸೋಜ ಸಮಗ್ರ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ದೇವೇಂದ್ರ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಮಲ್ಲಿಗೆ ಬೆಳೆಗಾರ ವಿಠಲ, ಯೋಜನೆ ಮೇಲ್ವಿಚಾರಕಿ ಸುಮಲತಾ, ಕೃಷಿ ಅಧಿಕಾರಿ ಉಮೇಶ್ ಬಿ.ಕೆ., ಸೇವಾ ಪ್ರತಿನಿಧಿ ಹೇಮಾ, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.