ಜಿಲ್ಲೆ

January 13: ಕೂರ್ಮಗಡ ಜಾತ್ರೆಗೆ ತೆರಳಲು ವಿಧಿಸಿದ ನಿರ್ಬಂಧಗಳೇನು..? ಇಲ್ಲಿದೆ ಮಾಹಿತಿ

ಕಾರವಾರ: January 13 ರಂದು ನಡೆಯಲಿರುವ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಗೆ ಹಿರಿಯರು ಹಾಗೂ ಮಕ್ಕಳು ತೆರಳುವುದನ್ನು ನಿರ್ಬಂಧಿಸಲು ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಉಪವಿಭಾಗಾಧಿಕಾರಿ ಕನಿಷ್ಕ ಅವರ ಅಧ್ಯಕ್ಷತೆಯಲ್ಲಿ ಕೂರ್ಮಗಡ ದೇವರ ಜಾತ್ರೆಗೆ ತೆರಳಲಿರುವ ಜಾತ್ರಾ ಸಮಿತಿ ಹಾಗೂ ಅಧಿಕಾರಿಗಳ ಜಂಟಿ ಸಭೆ ಸೋಮವಾರ ನಡೆಯಿತು.

2019 ರಲ್ಲಿ ಜಾತ್ರೆಗೆ ತೆರಳಿ ವಾಪಸಾಗುತ್ತಿದ್ದ ದೋಣಿಯೊಂದು ಮಗುಜಿ 16 ಜನ ಮೃತಪಟ್ಟಿದ್ದರು. ನಂತರ ಜಾತ್ರೆಗೆ ತೆರಳಲು ಸಾಕಷ್ಟು ನಿರ್ಭಂಧಗಳನ್ನು ವಿಧಿಸಲಾಗುತ್ತದೆ.

ಕೂರ್ಮಗಡ ಜಾತ್ರೆಯ ಸಂಬಂಧ ಕಂದಾಯ, ಪೊಲೀಸ್, ಆರೋಗ್ಯ ಮತ್ತು ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿಯ 3 ಪ್ರತ್ಯೇಕ ತಂಡಗಳನ್ನು ಸಭೆಯಲ್ಲಿ ರಚಿಸಲಾಯಿತು.

ತಂಡಗಳು, ಕೂರ್ಮಗಡ, ಕಡವಾಡ, ಹಾಗೂ ಬೈತಖೋಲ್‌ನಲ್ಲಿ ಕಾರ್ಯ ನಿರ್ವಹಿಸಲಿವೆ. ನೋಂದಾಯಿತ ಹಾಗೂ ಇನ್ಶುರೆನ್ಸ್ ಇರುವ ದೋಣಿಗಳಿಗೆ ಮಾತ್ರ ಪ್ರಯಾಣಿಕರನ್ನು ಕೊಂಡೊಯ್ಯಲು ಅವಕಾಶ ನೀಡಲಾಗುತ್ತದೆ.

January 13 ಇಲ್ಲಿದೆ ಮಾಹಿತಿ

70 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷ ಕೆಳಗಿನ ಮಕ್ಕಳು ದ್ವೀಪಕ್ಕೆ ತೆರಳಲು ಅವಕಾಶ ಇರುವುದಿಲ್ಲ ಎಂದು ಕನಿಷ್ಕ ತಿಳಿಸಿದ್ದಾರೆ. ಕಡವಾಡ ಹಾಗೂ ಬೈತಖೋಲ್‌ನಿಂದ ಮಾತ್ರ ಜಾತ್ರೆಗೆ ತೆರಳಲು ಅವಕಾಶ ಇರುತ್ತದೆ. ದಾಖಲೆ ಇಲ್ಲದೇ ಓಡಿಸುವ ದೋಣಿಗಳನ್ನು ನಿರ್ಬಂಧಿಸಲಾಗುವುದು ಎಂದು ಎಸಿ ತಿಳಿಸಿದ್ದಾರೆ.