ಜಿಲ್ಲೆ

ಪ್ರತಿ ತಾಲೂಕಿನಲ್ಲಿ ಜನತಾ ದರ್ಶನ

ಕಾರವಾರ: ಜಿಲ್ಲೆಯ ಪ್ರತಿ ತಾಲೂಕಿಗೂ ನಾನು ಬರುತ್ತೇನೆ. ಜನತಾ ದರ್ಶನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಕೋಡಿಬಾಗ ಸಾಗರ ದರ್ಶನ ಹಾಲ್ ನಲ್ಲಿ ಸೋಮವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ:ಹುತಾತ್ಮ ಯೋಧನ ಮನೆಯ ಮಣ್ಣು ಸಂಗ್ರಹಿಸಿದ ಬಿಜೆಪಿ
ಕಟ್ಟ ಕಡೆಯ ವ್ಯಕ್ತಿಯ ಸೌಲಭ್ಯ ತಲುಪಿಸಬೇಕು ಎಂದು ಸಿಎಂ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾಮಾನ್ಯ ಜನ ಅಲೆದಾಡಬಾರದು.‌ ಅವರನ್ನು ಕೂರಿಸಿ ಮಾತನಾಡಿ. ಸಾಧ್ಯವಾದರೆ ಚಹಾ ಕೊಡಿ ಎಂದರು. ಇಲ್ಲಿ ಬಂದ ಅರ್ಜಿಗಳಿಗೆ 10 ದಿನಗಳಲ್ಲಿ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದಲ್ಲಿ ಸಾಮಾನ್ಯ ಜನರ ಕೆಲಸ ಆಗುತ್ತದೆ ಎಂದು ತೋರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಾಮಾನ್ಯ ಜನರ ಬಡವರ ಕೆಲಸ ಅವರು ಅಂದುಕೊಂಡಂತೆ ಆಗಬೇಕು. ಎಲ್ಲ ಅಧಿಕಾರಿಗಳು ಇದಕ್ಕೆ ಸ್ಪಂದನ ಸುತ್ತಾರೆ ಎಂದುಕೊಂಡಿದ್ದೇನೆ ಎಂದರು. ಜಿಲ್ಲೆಯ ಜನರಿಗೆ ತೊಂದರೆ ಕೊಡುವ ಅಧಿಕಾರಿಗಳನ್ನು ಇಟ್ಟುಕೊಳ್ಳುವುದಿಲ್ಲ.‌ ನೀವು ಬೇಕು ಎಂದಲ್ಲಿ‌ ಕಳಿಸಿಕೊಡುತ್ತೇನೆ ಎಂದು ಎಚ್ಚರಿಸಿದರು.
ಶಾಸಕ ಸತೀಶ ಸೈಲ್ ಮಾತನಾಡಿ,‌ ಅಂಕೋಲಾ‌ ಹೊಸಗದ್ದೆ ಗ್ರಾಮದಲ್ಲಿ ಜನರಿಗೆ ಪಟ್ಟ ಕೊಟ್ಟರೂ ಅವರಿಗೆ ಭೂಮಿಯ ಹಕ್ಕು ಸಿಕ್ಕಿರಲಿಲ್ಲ. ಅದನ್ನು ಬಗೆಹರಿಸಿ ಆರ್ ಟಿಸಿ ಕಾಲಂ‌ ನಂಬರ್ 11 ರ ಬದಲು 9 ರಲ್ಲಿ ತರಲು ಪ್ರಯತ್ನ ನಡೆಸಿದ್ದೇವೆ ಎಂದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸಿ ಜಯಲಕ್ಷ್ಮೀ ರಾಯಕೋಡ್ ಸ್ವಾಗತಿಸಿದರು. ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ , ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಸ್ ಪಿ ಎನ್.ವಿಷ್ಣುವರ್ಧನ, ಎಡಿಸಿ ರಾಜು ಮೊಗವೀರ, ಡಿಎಫ್ಒ ಪ್ರಶಾಂತ ಕುಮಾರ್, ಕೆಟಿಆರ್ ಡಿಎಫ್ಒ ನೀಲೇಶ ವೇದಿಕೆಯಲ್ಲಿದ್ದರು.