More

    ಹುತಾತ್ಮ ಯೋಧನ ಮನೆಯ ಮಣ್ಣು ಸಂಗ್ರಹಿಸಿದ ಬಿಜೆಪಿ

    ಕಾರವಾರ : ನಗರದ ಪ್ರತಿ ವಾರ್ಡ್ನಲ್ಲೂ ವೀರ ಯೋಧರು ಬೆಳೆಯಲಿ ಎಂದು ಎಂಎಲ್‌ಸಿ ಗಣಪತಿ ಉಳ್ವೇಕರ್ ಆಶಿಸಿದರು.
    ಬಿಜೆಪಿಯಿಂದ ಆಯೋಜಿಸಿದ್ದ `ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ನಗದ ಕೋಡಿಬಾಗ ಕೋಮಾರಪಂತವಾಡದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
     ಕಾರವಾರದ ಹುತಾತ್ಮ ವೀರ ಯೋಧ ವಿಜಯಾನಂದ ನಾಯ್ಕ ಅವರ ಮನೆಯ ಮಣ್ಣನ್ನು ಸಂಗ್ರಹಿಸಿ ನವದೆಹಲಿಯ ಅಮೃತ ಉದ್ಯಾನದಲ್ಲಿ ಹಾಕುವುದು ತುಂಬಾ ಸಂತೋಷದ ಸಂಗತಿ ಎಂದರು.
    ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ದೇಶದ ಪ್ರತಿ ನಾಗರಿಕನು ದೇಶ ರಕ್ಷಣೆಗೆ ಮುಂದಾಗಬೇಕು. ಮತ್ತು ಗಡಿ ಕಾಯುವ ಸೈನಿಕರು ನಮ್ಮನ್ನು ಕಾಯುವ ರಕ್ಷಕರನ್ನು ನೆನೆಯಬೇಕಾಗಿದೆ. ನಮ್ಮ ಸುತ್ತಲೂ ಇರುವ ಸೈನಿಕರ ಮನೆ ಮಣ್ಣನ್ನು ಗ್ರಾಮ ಪಂಚಾಯತಿವಾರು ಸಂಗ್ರಹಿಸಿ ಮಂಡಲದ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರ ಮೂಲಕ ನೇರವಾಗಿ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮೆಯ ಕಾರ್ಯಕ್ರಮ ಎಂದರು.
    ಬಿಜೆಪಿ ಜಿಲ್ಲಾ ಪ್ರಭಾರಿ ಆರತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದಿ.ವಿಜಯಾನಂದ ನಾಯ್ಕ ಅವರ ಪಾಲಕರನ್ನು ಸನ್ಮಾನಿಸಲಾಯಿತು. ಬಿಜೆಪಿ ಪ್ರಮುಖರಾದ ರಾಜೇಂದ್ರ ನಾಯ್ಕ, ಮನೋಜ ಭಟ್, ಉದಯ ಬಶೆಟ್ಟಿ, ಕಿಶನ್ ಕಾಂಬ್ಳೆ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts