ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ನಿಸರ್ಗದತ್ತ ಆಹಾರವಾದ ಹಲಸು ಮಾತ್ರ ರಾಸಾಯನಿಕ ರಹಿತವಾಗಿರುವ ಹಣ್ಣು ಎಂದು ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಹೇಳಿದರು.
ಬ್ರಹ್ಮಾವರ ರೋಟರಿ ಕ್ಲಬ್, ಕೃಷಿ ವಿಜ್ಞಾನ ಕೇಂದ್ರ ಮತ್ತು ನಾನಾ ಸಂಘ ಸಂಸ್ಥೆಯವರ ಸಹಕಾರದಲ್ಲಿ ಎಸ್‌ಎಂಎಸ್ ಸಮುದಾಯ ಭವನದಲ್ಲಿ ಶುಕ್ರವಾರದಿಂದ ಭಾನುವಾರ ತನಕ ಜರುಗಲಿರುವ ಹಲಸು ಮತ್ತು ಹಣ್ಣು ಮೇಳ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಲಸು ಸೇರಿದಂತೆ ಗ್ರಾಮೀಣ ಭಾಗದ ಹಲವಾರು ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ದೊರಕಿದಲ್ಲಿ ರಾಸಾಯನಿಕ ಬಳಕೆಯ ಫಾಸ್ಟ್‌ಫುಡ್‌ನಿಂದ ಜನರು ಮುಕ್ತರಾಗಿ ನಿಸರ್ಗದತ್ತ ಹಣ್ಣುಗಳ ತಿನಿಸಿನಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದರು.
ಪ್ರಗತಿಪರ ಕೃಷಿಕ ಶ್ರೀನಿವಾಸ ಹೆಗ್ಡೆ ಕೊಕ್ಕರ್ಣೆ, ಜೇನು ಕೃಷಿಕ ಸುರೇಶ್ ಕರ್ಕೆರಾ ಇವರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ರೋಟರಿ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ಎಸ್‌ಎಂಎಸ್ ಸಿರಿಯನ್ ಚರ್ಚ್ ವಿಕಾರ್ ಜನರಲ್ ಫಾ.ಎಂ.ಸಿ.ಮಥಾಯಿ, ಬ್ಯಾಂಕ್ ಆಫ್ ಬರೋಡಾ ಉಪ ಪ್ರಾದೇಶಿಕ ವ್ಯವಸ್ಥಾಪಕ ವಿದ್ಯಾಧರ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್, ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಣಾಧಿಕಾರಿ ಸಚಿನ್ ಹೆಗ್ಡೆ, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಧೀರ್ ಕಾಮತ್, ಎಸ್‌ಕೆಪಿಎ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಪ್ರತೀಶ್ ಕುಮಾರ್, ಎಸ್‌ಎಂಎಸ್ ಸಿರಿಯನ್ ಚರ್ಚ್ ಟ್ರಸ್ಟಿ ಮಿಲ್ಟನ್ ಒಲಿವೇರಾ, ರೋಟರಿ ಸಂಕಯ್ಯ ಶೆಟ್ಟಿ ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿ ಡಾ.ಧನಂಜಯ್ ಸ್ವಾಗತಿಸಿ, ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಶೆಟ್ಟಿ ವಂದಿಸಿದರು.