ಕುಕನೂರು: ಶಾಸಕ ಬಸವರಾಜ ರಾಯರಡ್ಡಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ತಾಲೂಕಿನ ಇಟಗಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಬಸಪ್ಪ ದೊಡ್ಮನಿ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜನರ ಹಾಗೂ ಅಭಿವೃದ್ಧಿ ಪರ ಚಿಂತನೆ ಹೊಂದಿದ್ದಾರೆ. ಈಗಾಗಲೇ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇನ್ನೂ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನ ನೀಡಿದರೇ ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿ ಹೆಚ್ಚಾಗಲು ಸಾಧ್ಯ ಎಂದರು.
ಇದನ್ನೂ ಓದಿ: ನಿಗಮ-ಮಂಡಳಿಗೆ ಮೇಲೆ ಕಣ್ಣು ನಾಯಕರ ಬೆನ್ನು ಬಿದ್ದಿರುವ ಆಕಾಂಕ್ಷಿಗಳು ಮಂತ್ರಿಮಂಡಲ ವಿಸ್ತರಣೆಗೂ ಮುನ್ನವೇ ಲಾಬಿ
ಗ್ರಾಪಂ ಮಾಜಿ ಅಧ್ಯಕ್ಷರಾದ ಹನುಮಪ್ಪ ಸಂಗಟಿ, ರಾಮಣ್ಣ ಹನುಮಪ್ಪ ಹಿರೇಮನಿ, ಮಾಜಿ ಉಪಾಧ್ಯಕ್ಷ ಶಂಕ್ರಪ್ಪ ಕನಕಪ್ಪ ಕೋರಿ, ಪ್ರಮುಖರಾದ ರಾಮು ಕೌದಿ, ಪಕೀರಪ್ಪ ಲಮಾಣಿ, ಮಾರುತಿ ಭಜಂತ್ರಿ, ಗಾಳೆಪ್ಪ ಪೂಜಾರ, ಶರಣಪ್ಪ ಮ್ಯಾಗಳಮನಿ, ಪರಸಪ್ಪ ಹಿರೇಮನಿ, ಹನುಮಂತಪ್ಪ ಪೂಜಾರ ಇತರರಿದ್ದರು.