ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಟಿಕೋತ್ಸವ ನಡೆಯಿತು.  
ಜಿಲ್ಲೆ

ಬಾಲ್ಯದಲ್ಲೇ ಸಂಸ್ಕಾರ ಕಲಿಸುವುದು ಮುಖ್ಯ

Karthika K.S

ಕುಂದಾಪುರ: ಮಕ್ಕಳಿಗೆ ಎಳವೆಯಲ್ಲೇ ಉತ್ತಮ ಸಂಸ್ಕಾರ ಕಲಿಸುವುದರೊಂದಿಗೆ, ಮಕ್ಕಳ ಆಹಾರದ ಬಗ್ಗೆ ಪಾಲಕರಿಗೆ ಕಾಳಜಿ ವಹಿಸಬೇಕು ಎಂದು ಡಾ.ವಾಣಿಶ್ರೀ ಐತಾಳ್​ ಹೇಳಿದರು.

ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಪೂರ್ವ ಪ್ರಾಥಮಿಕ ವಿಭಾಗದ ಟಿಕೋತ್ಸವದಲ್ಲಿ ಪ್ರಮಾಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಆಡಳಿತ ಮಂಡಳಿ ಅಧ್ಯಕ್ಷ ರಾಮಕೃಷ್ಣ ಕಾಮತ್​, ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ, ಪದವಿ ಪೂರ್ವ ವಿಭಾಗ ಪ್ರಾಂಶುಪಾಲ ಸಂದೀಪ ಗಾಣಿಗ, ಉಪಪ್ರಾಂಶುಪಾಲ ಸುಜಯ್​ ಕೋಟೆಗಾರ್​ ಉಪಸ್ಥಿತರಿದ್ದರು. ಪೂರ್ವ ಪ್ರಾಥಮಿಕ ವಿಭಾಗ ಮುಖ್ಯಸ್ಥೆ ಪ್ರಮೀಳಾ ಡಿಸೋಜ ಸ್ವಾಗತಿಸಿದರು. ಪ್ರಾಥಮಿಕ ವಿಭಾಗ ಮುಖ್ಯಸ್ಥೆ ರೇಷ್ಮಾ ಡಿಸೋಜ ಅತಿಥಿಗಳನ್ನು ಪರಿಚಯಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣ ಅಡಿಗ ವಂದಿಸಿದರು.