ಕೋಟ: ಶ್ರೀನಿವಾಸ ಕಲ್ಯಾಣೋತ್ಸವ ಸಾಸ್ತಾನ ಭಾಗದಲ್ಲಿ ನಡೆಯುತ್ತಿರುವುದು ಇತಿಹಾಸದ ಪುಟಕ್ಕೆ ಸೇರುವ ಐತಿಹಾಸಿಕ ಘಟ್ಟ ಹಾಗೂ ಬಂಗಾರದ ಅಕ್ಷರದಲ್ಲಿ ಬರೆಯುವಂತೆ ಸಾಕ್ಷೀಕರಿಸಿದೆ. ಶ್ರೀನಿವಾಸನ ಕಲ್ಯಾಣ ಕಲಿಯುಗದಲ್ಲಿ ಕಣ್ತುಂಬಿಕೊಳ್ಳುವುದೇ ಭಾಗ್ಯ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಸಾಸ್ತಾನದ ಕಾರ್ತಿಕ್ ಎಸ್ಟೇಟ್‌ನಲ್ಲಿ ಏ.1ರಿಂದ 3ರ ವರೆಗೆ ನಡೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಭೂವೈಕುಂಠ ಮಹಾದ್ವಾರ ಗುರುವಾರ ಉದ್ಘಾಟಿಸಿ ಮಾತನಾಡಿದರು.
ಉಗ್ರಾಣಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಹಿರಿಯರಾದ ಶಿವರಾಮ ಉಡುಪ, ಉದ್ಯಮಿ ಆನಂದ್ ಮರಕಾಲ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಮಾಜಿ ಅಧ್ಯಕ್ಷ ಐರೋಡಿ ಜಗದೀಶ್ ಕಾರಂತ, ಸಮಿತಿ ಉಪಾಧ್ಯಾಕ್ಷ ಪ್ರತಾಪ್ ಶೆಟ್ಟಿ, ಸಮಿತಿ ಪ್ರಮುಖರಾದ ರತ್ನ ಜೆ.ರಾಜ್, ಲೀಲಾವತಿ ಗಂಗಾಧರ್, ಹರೀಷ್ ನಾಯಕ್, ದಯಾನಂದ ಶ್ಯಾನುಭಾಗ್, ಗೋವಿಂದ ಪೂಜಾರಿ, ಸುಲತಾ ಎಸ್.ಹೆಗ್ಡೆ, ನಾಗರಾಜ್ ಗಾಣಿಗ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಜ್ಯೋತಿ ಉದಯ್ ಕುಮಾರ್, ರವೀಂದ್ರ ತಿಂಗಳಾಯ, ಶ್ರೀಪತಿ ಅಧಿಕಾರಿ, ಸೀತಾರಾಮ ಆಚಾರ್, ಚೆನ್ನಯ ಪೂಜಾರಿ, ಕುಸುಮಾ ಮನೋಜ್, ರಜನಿ ಶೈಲೇಶ್, ಸುರೇಶ್ ಪೂಜಾರಿ, ಸಮಿತಿ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಪ್ರಮುಖರಾದ ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್ ಪ್ರಸ್ತಾವನೆ ಸಲ್ಲಿಸಿದರು. ಕಾರ್ಯದರ್ಶಿ ರವೀಂದ್ರ ತಿಂಗಳಾಯ ವಂದಿಸಿದರು.