ಜಿಲ್ಲೆ

ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ಯತ್ನ?

Mysuru Rural

ಹುಬ್ಬಳ್ಳಿ : ಧಾರವಾಡ ಜಿ.ಪಂ. ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣ ತನಿಖೆ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಧಾರವಾಡದ ವಿನಯ ಕುಲಕರ್ಣಿ ಬಿಜೆಪಿ ಸೇರಲು ಪ್ರಯತ್ನ ನಡೆಸಿರುವ ವದಂತಿ ಹರಡಿದೆ.

ಹತ್ಯೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸುವುದನ್ನು ತಪ್ಪಿಸಿಕೊಳ್ಳಲು ವಿನಯ ಕುಲಕರ್ಣಿ, ಎಂಎಲ್​ಸಿ ಸಿ.ಪಿ. ಯೋಗೇಶ್ ಮೂಲಕ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಆರ್​ಎಸ್​ಎಸ್ ಪ್ರಮುಖರ ಭೇಟಿಗೆ ಯತ್ನಿಸಿದ್ದಾರೆ. ಆದರೆ, ಭೇಟಿ ಸಾಧ್ಯವಾಗಿಲ್ಲ ಎಂದು ಕೇಳಿಬಂದಿದೆ.

ನಾನು ಕಾಂಗ್ರೆಸ್​ನ ಕಟ್ಟಾಳು. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಸಿ.ಪಿ. ಯೋಗೇಶ ಅವರನ್ನೂ ಭೇಟಿಯಾಗಿಲ್ಲ, ದೆಹಲಿಗೂ ಹೋಗಿಲ್ಲ. ಹೊಸ ಕುದುರೆ ಖರೀದಿಗೆಂದು ರಾಜಸ್ಥಾನಕ್ಕೆ ತೆರಳಿದ್ದೆ ಅಷ್ಟೆ. ವಿನಯ ಕುಲಕರ್ಣಿ, ಮಾಜಿ ಸಚಿವ ಬಿಜೆಪಿ ಕೇಡರ್ ಆಧಾರಿತ ರಾಷ್ಟ್ರೀಯ ಪಕ್ಷ. ಹಾಗೆ ರಾಷ್ಟ್ರೀಯ ನಾಯಕರನ್ನು ನೇರ ಭೇಟಿಯಾಗಿ ಸೇರಲು ಬರುವುದಿಲ್ಲ. ಜಿಲ್ಲೆ ಮತ್ತು ರಾಜ್ಯ ನಾಯಕರ ಗಮನಕ್ಕೆ ತರದೇ ಅಂಥ ಸೇರ್ಪಡೆ ನಡೆಯುವುದಿಲ್ಲ. ಅಂಥ ಯಾವ ಚರ್ಚೆಯೂ ನಡೆದಿಲ್ಲ. ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ