ಹೆಬ್ರಿ: ಕರಾವಳಿ ಸೊಗಡನ್ನು ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಣ ಬಡಿಸುವ ಮಹತ್ವದ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಸಿರುವ ಶಾಂತಿನಿಕೇತನಕ್ಕೆ ಧನ್ಯವಾದಗಳು ಎಂದು ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕ ಅರುಣ್ ಕುಮಾರ್ ಕೆ. ಹೇಳಿದರು.
ಶಾಂತಿನಿಕೇತನದ ವತಿಯಿಂದ ಕುಡಿಬೈಲ್ ಕುಚ್ಚೂರಿನಲ್ಲಿ ನಡೆದ ಕೆಸರ್ ಗದ್ದೆಗ್ ಒಂದಿನ ಕ್ರೀಡಾಕೂಟದಲ್ಲಿ ಸಮಾರೋಪದಲ್ಲಿ ಮಾತನಾಡಿದರು.
ಶಾಂತಿನೀಕೆತನದ ಸಂಸ್ಥಾಪಕ ರಾಜೇಶ್ ಮಾತನಾಡಿ, ಶಾಂತಿನಿಕೇತನ ಸಂಸ್ಥೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ. ಕರಾವಳಿ ವಿಶಿಷ್ಟ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ. ಆಚಾರ ವಿಚಾರಗಳಿಂದ ಪ್ರಸಿದ್ಧಿ ಹೊಂದಿದೆ ಎಂದರು.
ಹೊಯ್ಸಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿಜಯನಗರ ರನ್ನರ್ ಆಫ್ ಪ್ರಶಸ್ತಿ ಪಡೆಯಿತು. ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್, ಉಪನ್ಯಾಸಕ ವಾಸುದೇವ್ ಬಿ.ಎಂ., ಆಡಳಿತ ಮಂಡಳಿ ಸದಸ್ಯರಾದ ಜಯಕರ, ನರೇಂದ್ರ, ಮಹೇಶ್, ಕೆ.ಗಣೇಶ್, ರಾಜೇಶ್ರೀ, ನಾಗರಾಜ್, ಪ್ರಸನ್ನ ಇದ್ದರು.