ಜಿಲ್ಲೆ

ವೈದ್ಯ ಹುದ್ದೆ ನೇಮಕಾತಿಗೆ ಸಂದರ್ಶನ

ಸೌಮ್ಯ ಆರ್

ಕಾಸರಗೋಡು: ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿಯಲ್ಲಿ ಅರ್ಬನ್ ಹೆಲ್ತ್ ಆ್ಯಂಡ್ ವೆಲ್‌ನೆಸ್ ಸೆಂಟರ್‌ನಲ್ಲಿ ಗೈನಾಕಾಲಜಿ, ಜನರಲ್ ಮೆಡಿಸಿನ್ ಆಂಡ್ ಡೆರ್ಮಟೋಲಜಿ ವಿಭಾಗಗಳಲ್ಲಿ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುವುದು. ಆಸಕ್ತ ಉದ್ಯೋಗಾರ್ಥಿಗಳು ಅಕ್ಟೋಬರ್ 5ರಂದು ಬೆಳಗ್ಗೆ 10ಕ್ಕೆ ಕಾಞಂಗಾಡ್‌ನಲ್ಲಿರುವ ಕಾಸರಗೋಡು ಜಿಲ್ಲಾ ಆರೋಗ್ಯ ಕೇರಳ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಮೂಲ ಪ್ರಮಾಣಪತ್ರ ಹಾಗೂ ಅವುಗಳ ಪ್ರತಿಗಳ ಸಹಿತ ಹಾಜರಾಗಬೇಕು.

ಪಾತೊಲೊಜಿಸ್ಟ್ ಹುದ್ದೆ: ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿಯನ್ವಯ ಪಾತೊಲೊಜಿಸ್ಟ್( ರೋಗಶಾಸ್ತ್ರಜ್ಞರ) ಹುದ್ದೆಗೆ ನೇಮಕಾತಿ ನಡೆಸಲಾಗುವುದು. ಆಸಕ್ತ ಉದ್ಯೋಗಾರ್ಥಿಗಳು ಅ.5ರಂದು ಬೆಳಗ್ಗೆ 10ಕ್ಕೆ ಕಾಞಂಗಾಡ್‌ನಲ್ಲಿರುವ ಕಾಸರಗೋಡು ಜಿಲ್ಲಾ ಆರೋಗ್ಯ ಕೇರಳ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಮೂಲ ಪ್ರಮಾಣಪತ್ರ ಹಾಗೂ ಅವುಗಳ ಪ್ರತಿಗಳ ಸಹಿತ ಹಾಜರಾಗಬೇಕು. ದೂರವಾಣಿ ಸಂಖ್ಯೆ- 0467 2209466.