ಸಾಧಕರ ಜೀವನ ಮಾದರಿ : ಕೃಷ್ಣ ಪ್ರಸಾದ್ ಅಡ್ಯಂತಾಯ ಅನಿಸಿಕೆ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ

sanmana
Published on

ಪೆರ್ಲ: ಊರಿನ ಬೆಳವಣಿಗೆಯಲ್ಲಿ ಅಲ್ಲಿನ ವಿದ್ಯಾಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲಿನ ಪ್ರತಿಯೊಂದು ವ್ಯವಸ್ಥೆ ಕೂಡ ಆ ಶಾಲೆಗೆ ಅನುಗುಣವಾಗಿರುತ್ತದೆ. ಆ ನಿಟ್ಟಿನಲ್ಲಿ ಕಾಟುಕುಕ್ಕೆ ಶಾಲೆ ಹಾಗೂ ಶಾಲೆ ಸ್ಥಾಪಕ ಶಂಕರ ಮೋಹನದಾಸ ಆಳ್ವರು ಊರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಾಧಕರ ಜೀವನ ನಮಗೆ ಮಾದರಿಯಾಗಬೇಕು ಎಂದು ಕೃಷ್ಣ ಪ್ರಸಾದ ಅಡ್ಯಂತಾಯ ಹೇಳಿದರು.

ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಂಸ್ಥೆ ಸ್ಥಾಪಕ ಶಂಕರ ಮೋಹನದಾಸ ಆಳ್ವರ ಸಪ್ತಮ ಸಂಸ್ಮರಣೆ ಹಾಗೂ ಕುಂಬಳೆ ಗಾಂಧಿ ಬಿ.ದೇವಪ್ಪ ಆಳ್ವರ ಜೀವನ ಚರಿತ್ರೆ ಕುರಿತು ನಡೆದ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಂಕರ ಮೋಹನದಾಸ ಆಳ್ವ ಹಾಗೂ ಕುಂಬಳೆ ಗಾಂಧಿ ಬಿ.ದೇವಪ್ಪ ಆಳ್ವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪ ನಮನ ಸಲ್ಲಿಸಿದರು. ಕುಂಬಳೆ ಗಾಂಧಿ ಬಿ.ದೇವಪ್ಪ ಆಳ್ವರ ದತ್ತಿನಿಧಿಯ ಅಂಗವಾಗಿ ಕಾಸರಗೋಡು ಜಿಲ್ಲೆ ಶಾಲೆಗಳ ಮಕ್ಕಳಿಗೆ ನಡೆದ ಕುಂಬಳೆ ಗಾಂಧಿ ದೇವಪ್ಪ ಆಳ್ವ ಎಂಬ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಸಂಸ್ಥೆ ಅಧ್ಯಕ್ಷ ಸಂಜೀವ ರೈ, ಕುಂಬಳೆ ಗಾಂಧಿ ದೇವಪ್ಪ ಆಳ್ವರ ದತ್ತಿನಿಧಿ ಸ್ಥಾಪಕ ರೂವಾರಿ ರಾಮಕೃಷ್ಣ ಶಿವಪ್ರಸಾದ್ ಆಳ್ವ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಸುಧಾಕರ ಕಲ್ಲಗದ್ದೆ, ಆಡಳಿತ ಮಂಡಳಿ ಸದಸ್ಯ ಬಿ.ಎಸ್.ಗಾಂಭೀರ್, ಸುಬ್ರಹ್ಮಣ್ಯೇಶ್ವರ ಹೈಸ್ಕೂಲ್ ಕಾಟುಕುಕ್ಕೆ ಮುಖ್ಯಶಿಕ್ಷಕ ಹರಿಪ್ರಸಾದ್ ಶೆಟ್ಟಿ, ಅಧ್ಯಾಪಕ ಸುರೇಶ್ ಕೆ.ಕುಂಬಳೆ, ಆಡಳಿತ ಮಂಡಳಿ ಸದಸ್ಯ ಶಿವರಾಂ ಭಟ್, ವಿನೋದ ಶೆಟ್ಟಿ ದಂಬೆಕಾನ, ಸಂದೇಶ್ ರೈ, ದೇವಪ್ರಸಾದ ಆಳ್ವ, ಲಕ್ಷ್ಮೀನಾರಾಯಣ ಶೆಟ್ಟಿ, ಸಂಕಪ್ಪ ಶೆಟ್ಟಿ, ರಮಾನಂದ ರೈ, ಕಾನ ಈಶ್ವರ ಭಟ್, ನಿವೃತ್ತ ಅಧ್ಯಾಪಕಿ ಸರಸ್ವತಿ ಪ್ರಸನ್ನ, ನಾರಾಯಣನ್, ಮಾತೃ ಸಂಘ ಅಧ್ಯಕ್ಷೆ ಆಯಿಷಾ, ರಘುರಾಮ ರೈ, ಕೃಷ್ಣ ಭಟ್ ಪಿಲಿಂಗಲ್ಲು ಉಪಸ್ಥಿತರಿದ್ದರು.

ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಪ್ರಾಸ್ತಾವನೆಗೈದು. ಆಡಳಿತ ಮಂಡಳಿ ಸದಸ್ಯ ಲೋಕನಾಥ ಶೆಟ್ಟಿ ಸ್ವಾಗತಿಸಿ, ಅಧ್ಯಾಪಕ ಮಹೇಶ್ ಏತಡ್ಕ ವಂದಿಸಿದರು. ಅಧ್ಯಾಪಕಿ ವಾಣಿ ಕೆ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net