ಗಮಕ ವಾಚಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಸರಳೇಬೆಟ್ಟು ಮಣಿಪಾಲದಲ್ಲಿ ನಡೆಯಿತು 
ಜಿಲ್ಲೆ

ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ

ಕಾರ್ಕಳ: ಶಿವ ಪ್ರೇರಣಾ ಚಾರಿಟೆಬಲ್ ಟ್ರಸ್ಟ್ ಸರಳೇಬೆಟ್ಟು ಮಣಿಪಾಲ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಸಹಯೋಗದಲ್ಲಿ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಮಣಿಪಾಲ ಸರಳೇಬೆಟ್ಟುವಿನ ರತ್ನ ಸಂಜೀವ ಕಲಾಮಂಡಲದಲ್ಲಿ ನಡೆಯಿತು.

ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ತಾಲೂಕು ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಗಮಕ ವ್ಯಾಖ್ಯಾನಕಾರ ಡಾ.ರಾಘವೇಂದ್ರ ರಾವ್, ಗಮಕ ವಾಚಕಿ ಮಂಜುಳಾ ಮಂಚಿ, ಪಾಟೀಲ್ ಕ್ಲೋತ್ ಸ್ಟೋರ್ ಮಾಲೀಕ ಗಣೇಶ್ ಪಾಟೀಲ್ ಹಾಗೂ ರಮಾನಂದ ಸಾಮಂತ್, ಸಂಗೀತ ಶಿಕ್ಷಕಿ ಉಷಾ ಹೆಬ್ಬಾರ್, ಹಾರ್ಮೋನಿಯಂ ಗುರುಗಳಾದ ನಿತ್ಯಾನಂದ ನಾಯಕ್ ಹಾಗೂ ತಬಲ ಗುರುಗಳಾದ ನಾಗರಾಜ್ ಕರ್ವಿ (ಸಂಸ್ಥೆಯ ಶಿಕ್ಷಕರು)ಉಪಸ್ಥಿತರಿದ್ದರು. ನರಸಿಂಹ ನಾಯಕ್ ನಿರೂಪಿಸಿದರು.