ಸಾಲಿಗ್ರಾಮ ರೋಟರಿ ಕ್ಲಬ್ ಅಂತಾರಾಷ್ಟ್ರೀಯ ರೋಟರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 30 ಸದಸ್ಯರ ತಂಡದೊಂದಿಗೆ ದೇವಪ್ಪ ಪಟಗಾರ ಪ್ರಶಸ್ತಿ ಸ್ವೀಕರಿಸಿದರು.  
ಜಿಲ್ಲೆ

ಸಾಲಿಗ್ರಾಮ ರೋಟರಿ ಕ್ಲಬ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಇಂದಿರಾ ಎನ್ ಕೆ

ಕೋಟ: ಇತ್ತೀಚೆಗೆ ಶಿವಮೊಗ್ಗದಲ್ಲಿ 2023- 24ನೇ ಸಾಲಿನ ರೋಟರಿ ಅವಾರ್ಡ್ಸ್ ನೈಟ್ ಕಾರ್ಯಕ್ರಮದಲ್ಲಿ ಕೋಟ ಸಾಲಿಗ್ರಾಮ ರೋಟರಿ ಕ್ಲಬ್‌ಗೆ ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಸೈಟೇಷನ್ ಅವಾರ್ಡ್ ಮತ್ತು ಮೆಂಬರ್‌ಷಿಪ್ ಗ್ರೋಥ್‌ಗಾಗಿ ಗೋಲ್ಡನ್ ಸ್ಟಾರ್ ಪ್ರೆಸಿಡೆಂಟ್ ಅವಾರ್ಡ್ ಸಹಿತ 22 ಪ್ರಶಸ್ತಿಗಳೊಂದಿಗೆ ಸ್ಮಾಲ್ ಕ್ಲಬ್ ಕ್ಯಾಟಗರಿನಲ್ಲಿ ಬೆಸ್ಟ್ ಕ್ಲಬ್ ಅವಾರ್ಡ್ ತನ್ನದಾಗಿಸಿಕೊಂಡಿತು.

2023-24ನೇ ಸಾಲಿನ ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ದೇವಪ್ಪ ಪಟಗಾರ, ಕಾರ್ಯದರ್ಶಿ ತಿಮ್ಮ ಪೂಜಾರಿ, ವಲಯ 2ರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪ್ರಭು, ಫಾಸ್ಟ್ ಎ.ಜಿ ರಾಜೇಂದ್ರ ಸುವರ್ಣ ಹಾಗೂ 30 ಸದಸ್ಯರ ತಂಡದೊಂದಿಗೆ ದೇವಪ್ಪ ಪಟಗಾರ ್ರಶಸ್ತಿ ಸ್ವೀಕರಿಸಿದರು.