ಜಿಲ್ಲೆ

ಅಂತರ್ ಶಾಲಾ ದೇಶ ಭಕ್ತಿಗೀತೆ, ನೃತ್ಯ ಸ್ಪರ್ಧೆ

ಇಂದಿರಾ ಎನ್ ಕೆ

ಕುಂದಾಪುರ: ಕೆಥೊಲಿಕ್ ಸಭಾ ಕುಂದಾಪುರ ಘಟಕದಿಂದ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಕುಂದಾಪುರ ಪುರಸಭೆ ವ್ಯಾಪ್ತಿಯೊಳಗಿನ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ದೇಶ ಭಕ್ತಿಗೀತೆ ಹಾಗೂ ನೃತ್ಯ ಸ್ಪರ್ಧೆಯನ್ನು ಕುಂದಾಪುರದ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಪಾವ್ಲ್ ರೇಗೊ ಆಶೀರ್ವಚನ ನೀಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ್, ತೀರ್ಪುಗಾರರಾದ ಐಶ್ವರ್ಯ ಜೋಗಿ, ಮನೋಜ್ ಲೊಪೆಸ್ ಹೊನ್ನಾವರ ಮತ್ತು ಲೊಯ್ಡ ರೆಬೆಲ್ಲೊ ಗಂಗೊಳ್ಳಿ, ಕೆಥೊಲಿಕ್ ಸಭಾ ಕುಂದಾಪುರದ ವಲಯ ಸಮಿತಿ ಅಧ್ಯಕ್ಷ ವಿಲ್ಸನ್ ಡಿಅಲ್ಮೆಡಾ, ವಿನಯಾ ಡಿಕೋಸ್ತಾ, ನಿರ್ಗಮನ ಅಧ್ಯಕ್ಷೆ ಶೈಲಾ ಡಿಅಲ್ಮೆಡಾ, ಕಾರ್ಯದರ್ಶಿ ಶಾಂತಿ ಪಿಂಟೊ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮೂಹ ಗೀತೆ

1 ರಿಂದ 7 ನೇ ತರಗತಿ ವಿಭಾಗದಲ್ಲಿ ಎಚ್.ಎಂ.ಎಂ. ಆಂಗ್ಲ ಮಾಧ್ಯಮ ಶಾಲೆ (ಪ್ರಥಮ), ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ), ಬ್ಯಾರೀಸ್ ಸಿ ಸೈಡ್ ಸ್ಕೂಲ್ ಕೋಡಿ (ತೃತೀಯ). 8 ರಿಂದ 10 ನೇ ತರಗತಿ ವಿಭಾಗದಲ್ಲಿ ಬ್ಯಾರೀಸ್ ಸೀ ಸೈಡ್ ಸ್ಕೂಲ್ ಕೋಡಿ (ಪ್ರಥಮ), ವೆಂಕಟರಮಣ ಪ್ರೌಢಶಾಲೆ ಕುಂದಾಪುರ (ದ್ವೀತಿಯ), ವಿ.ಕೆ.ಆರ್.ಆಚಾರ್ಯ ಆಂಗ್ಲ ಮಾದ್ಯಮ ಪ್ರೌಢಶಾಲೆ (ತೃತೀಯ) ಬಹುಮಾನ ಪಡೆಯಿತು. ಪಿಯುಸಿ ವಿಭಾಗದಲ್ಲಿ ಬ್ಯಾರೀಸ್ ಪಿ.ಯು.ಕಾಲೇಜು ಕೋಡಿ (ಪ್ರಥಮ), ಕುಂದಾಪುರ ಸರ್ಕಾರಿ ಪಿಯು ಕಾಲೇಜು (ದ್ವೀತಿಯ), ಸಂತ ಮೇರಿಸ್ ಪಿ.ಯು. ಕಾಲೇಜು ಕುಂದಾಪುರ (ತೃತೀಯ) ಬಹುಮಾನ ಗಳಿಸಿತು.

ನೃತ್ಯ ಸ್ಪರ್ಧೆ

1 ರಿಂದ 7ನೇ ತರಗತಿ ವಿಭಾಗದಲ್ಲಿ ವೆಂಕಟರಮಣ ಆಂಗ್ಲ ಮಾದ್ಯಮ ಶಾಲೆ ಕುಂದಾಪುರ (ಪ್ರಥಮ), ಎಚ್.ಎಂ.ಎಂ. ಪ್ರಾಥಮಿಕ ಶಾಲೆ ಕುಂದಾಪುರ (ದ್ವೀತಿಯ), ಯು.ಬಿ.ಎಂ.ಸಿ. ಕುಂದಾಪುರ (ತೃತೀಯ) ಹಾಗೂ 8ರಿಂದ 10ನೇ ತರಗತಿ ವಿಭಾಗದಲ್ಲಿ ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆ ಕುಂದಾಪುರ (ಪ್ರಥಮ), ವೆಂಕಟರಮಣ ಆಂಗ್ಲ ಮಾದ್ಯಮ ಶಾಲೆ ಕುಂದಾಪುರ (ದ್ವಿತೀಯ), ವಿ.ಕೆ.ಆರ್.ಆಚಾರ್ಯ ಕುಂದಾಪುರ (ತೃತೀಯ) ಹಾಗೂ ಪಿಯುಸಿ ವಿಭಾಗ ಸರ್ಕಾರಿ ಪ.ಪೂ. ಕಾಲೇಜು ಕುಂದಾಪುರ (ಪ್ರಥಮ) ಬಹುಮಾನ ಪಡೆಯಿತು.