ಜಿಲ್ಲೆ

ಇಂಟ್ ಎಡಿ ಜಿ.ಟಿ.ನಾಯಕ ವರ್ಗಾವಣೆ

Uttara Kannada - Subash Hegde

ಕಾರವಾರ: ರಾಜ್ಯ ಗುಪ್ತ ವಾರ್ತೆ(ಸ್ಟೇಟ್ ಇಂಟಲಿಜೆನ್ಸಿ) ಉತ್ತರ ಕನ್ನಡ ಜಿಲ್ಲಾ ಘಟಕದ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಟಿ.ನಾಯಕ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ವರ್ಗಾವಣೆಯಾಗಿದ್ದಾರೆ.‌

ಕಳೆದ ಎರಡು ವರ್ಷಗಳಿಂದ ಅವರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.‌

ಈ ಹಿಂದೆ ಅವರು ಶಿರಸಿ ಡಿವೈಎಸ್ ಪಿಯಾಗಿ, ಕಾರವಾರ ಎಸ್ ಪಿ ಕಚೇರಿಯಲ್ಲಿ ಜಿಲ್ಲಾ ಅಪರಾಧ ಧಾಖಲಾತಿ ವಿಭಾಗದ ಡಿವೈಎಸ್ ಪಿಯಾಗಿ ಕಾರ್ಯ ನಿರ್ವಹಿಸಿ ಸಾಕಷ್ಟು ಹೆಸರು ಗಳಿಸಿದ್ದರು.

ವರ್ಗಾವಣೆಗೊಂಡ ಗೋಪಾಲಕೃಷ್ಣ ಟಿ. ನಾಯಕ ಅವರನ್ನು ರಾಜ್ಯ ಗುಪ್ತವಾರ್ತೆ, ಕಾರವಾರ ಘಟಕದ‌ ಅಧಿಕಾರಿ ಸಿಬ್ಬಂದಿ, ಸನ್ಮಾನಿಸಿ ಬೀಳ್ಕೊಟ್ಟರು.