ಹೆಬ್ರಿ: ಮುದ್ರಾಡಿ ವಲಯದ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಸತ್ಯಶ್ರೀ ಸಂದ ಸದಸ್ಯ, ಇತ್ತೀಚೆಗೆ ಮೃತಪಟ್ಟ ಹರೀಶ್ ಕುಲಾಲ್ ಅವರಿಗೆ ಮೈಕ್ರೊ ಬಜತ ಡೆತ್ ಕ್ಲೇಮ್ 4,00,999 ರೂ., ಭೀಮ ಜ್ಯೋತಿ 1,34,888 ರೂ ಹಾಗೂ ಪಿಆರ್‌ಕೆಯಿಂದ ಸಾಲ ಮನ್ನಾವಾದ ಮೊತ್ತ 5,27,000 ರೂ. ಮಂಜೂರಾಗಿದೆ.
ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ ಮಂಜೂರಾತಿ ಪತ್ರ ಹಸ್ತಾಂತರಿಸಿದರು. ಹಿರಿಯರಾದ ಗಣಪತಿ ಮುದ್ರಾಡಿ, ವಲಯ ನಿಕಟ ಪೂರ್ವಾಧ್ಯಕ್ಷ ರತ್ನಾಕರ ಪೂಜಾರಿ, ಮುದ್ರಾಡಿ ಒಕ್ಕೂಟ ಅಧ್ಯಕ್ಷ ಸುಬ್ರಾಯ ಆಚಾರ್ಯ, ಶಿಕ್ಷಕ ಚಂದ್ರಶೇಖರ ಭಟ್, ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ವಲಯ ಮೇಲ್ವಿಚಾರಕಿ ಸುಮಲತಾ, ಸೇವಾಪ್ರತಿನಿಧಿ ಮಮತಾ, ಒಕ್ಕೂಟ ಪದಾಧಿಕಾರಿಗಳು, ಸಂ ಸದಸ್ಯರು ಉಪಸ್ಥಿತರಿದ್ದರು.