ಜಿಲ್ಲೆ

ಗುಣಮಟ್ಟದ ಕಾಮಗಾರಿ ನಡೆಸಿ ಸಕಾಲದಲ್ಲಿ ಪೂರ್ಣ: ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಆದೇಶ : ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ

ಸುಬ್ರಹ್ಮಣ್ಯ: ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಸೋಮವಾರ ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿ ನಡೆಯುತ್ತಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವನ್ನು ಪರಿಶೀಲಿಸಿದರು.

ಎಲ್ಲ ಕಾರ್ಯಗಳು ಸಕಾಲದಲ್ಲಿ ಹಾಗೂ ಗುಣಮಟ್ಟದೊಂದಿಗೆ ಶೀಘ್ರವಾಗಿ ಕಾಮಗಾರಿಗಳು ಪೂರ್ಣಗೊಳಿಸಿ ಪ್ರಯಾಣಿಕರ ಅನುಕೂಲತೆಗೆ ಲಭ್ಯವಾಗಬೇಕು ಎಂದು ಸಂಬಂಧಪಟ್ಟವರಿಗೆ ಆದೇಶಿಸಿದರು.

ವಿದ್ಯುದ್ದೀಕರಣ ಪರಿಶೀಲನೆ:

ಬಳಿಕ ಮೈಸೂರು ವಿಭಾಗದಲ್ಲಿ ನಡೆಯುತ್ತಿರುವ ವಿದ್ಯುದ್ದೀಕರಣ ಕಾಮಗಾರಿಗಳನ್ನೂ ಪರಿಶೀಲಿಸಿದರು. ಕಾರ್ಯಾಚರಣೆಯ ಸುರಕ್ಷೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ವಕ್ರಾಕೃತಿಗಳು, ಸೇತುವೆಗಳು ಮತ್ತು ಹಳಿ ನಿಯತಾಂಕಗಳು ಸೇರಿ ಪ್ರಮುಖ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ಸುರಕ್ಷಿತ ಹಾಗೂ ಸುಗಮ ರೈಲು ಸಂಚಾರದ ದೃಷ್ಟಿಯಿಂದ ಘಾಟಿ ವಿಭಾಗದಲ್ಲಿನ ಸುರಂಗ ಕಾಮಗಾರಿಗಳಿಗೆ ವಿಶೇಷ ಮಹತ್ವವನ್ನು ಪರಿಶೀಲಿಸಿದರು. ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್, ಗತಿಶಕ್ತಿ ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ್ ಭಾರತಿ ಹಾಗೂ ಮೈಸೂರು ವಿಭಾಗದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.