ಜಿಲ್ಲೆ

ಹೆಬ್ರಿ ಶಾಲೆಗೆ ಮೂಲಸೌಕರ್ಯ

ಇಂದಿರಾ ಎನ್ ಕೆ

ಹೆಬ್ರಿ: ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ, ಹೆಚ್ಚುವರಿ ಕೊಠಡಿ ಅಗತ್ಯವಿದ್ದು, ಶೀಘ್ರ ಒದಗಿಸಿಕೊಡಬೇಕು. ಕಾಯಂ ಶಿಕ್ಷಕರ ಬೇಡಿಕೆ ಈಡೇರಿಸಿ, ಶಾಲೆ ಬಳಿರುವ ಪಾರ್ಕಿಂಗ್ ಸಮಸ್ಯೆ ಸರಿಪಡಿಸಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಹೆಬ್ರಿ ಗ್ರಾಪಂ ವತಿಯಿಂದ ಮಹಿಳಾ, ಕಿಶೋರಿಯರ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಗುರುವಾರ ವಿದ್ಯಾರ್ಥಿಗಳು ಬೇಡಿಕೆಯನಿಟ್ಟರು.

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಬಿಸಿಯೂಟದ ನಿರುಪಯುಕ್ತ ನೀರಿಗಾಗಿ, ಇಂಗುಗುಂಡಿ ನಿರ್ಮಿಸಿ ಕೊಡುವಂತೆ ವಿದ್ಯಾರ್ಥಿಗಳು ಬೇಡಿಕೆಯಿಟ್ಟರು. ಗ್ರಾಪಂ ಅಧ್ಯಕ್ಷ ತಾರಾನಾಥ್ ಬಂಗೇರ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆಯತ್ತ ಹೆಚ್ಚು ಗಮನ ಹರಿಸಬೇಕು. ನೀವು ಅದನ್ನು ಇನ್ನಿತರರಿಗೆ ಕಲಿಸುವಂತಹಾಗಬೇಕೆಂದರು.

ನೋಡಲ್ ಅಧಿಕಾರಿ ಡಿಆರ್‌ಎಫ್‌ಒ ಜಯರಾಮ್, ಉಪಾಧ್ಯಕ್ಷೆ ಸುಪ್ರಿಯಾ, ಪಿಡಿಒ ಸದಾಶಿವ ಸೇರ್ವೆಗಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಸಂತಿ, ಆರೋಗ್ಯ ಇಲಾಖೆ ಡಾ.ಶ್ರೀಶೈಲ, ಆಪ್ತ ಸಮಾಲೋಚಕಿ ಪವಿತ್ರಾ, ಎಎಸ್‌ಐ ಶ್ರೀಧರ್ ಯು., ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು. ಪ್ರಸಾದ್ ಶೆಟ್ಟಿ ನಿರೂಪಿಸಿದರು.

ಶೌಚಗೃಹ ಅಗತ್ಯ

ಇಂದಿರ ನಗರ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮಂಗಗಳ ಕಾಟದಿಂದ ಮುಕ್ತಿಗೊಳಿಸಬೇಕು. ಇದು ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಶಾಲೆಗೆ ಶೌಚಗೃಹ ಅಗತ್ಯ ಇದೆ ಎಂದು ಸಭೆಯಲ್ಲಿ ವಿದ್ಯಾರ್ಥಿಗಳು ಮನವಿ ಮಾಡಿದರು.