ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಕರೊನಾ ಚಿಕಿತ್ಸೆಗಾಗಿ ಸರ್ಕಾರದಿಂದ ಒಂದು ಆಸ್ಪತ್ರೆ ಪಡೆದು ನಿರ್ವಹಣೆ ಮಾಡುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಫೌಂಡೇಶನ್ನ ಸುಧಾಮೂರ್ತಿ ಅವರ ಸರ್ಕಾರಕ್ಕೆ ಪತ್ರ ಬರೆದಿರುವುದರ ಜತೆಗೆ ತಮ್ಮೊಂದಿಗೆ ದೂರವಾಣಿಯಲ್ಲಿ ಚರ್ಚೆ ಕೂಡ ನಡೆಸಿದರು ಎಂದು ಸಚಿವರು ಹೇಳಿದರು
ಸರ್ಕಾರ ಒಂದು ಆಸ್ಪತ್ರೆಯನ್ನು ಫೌಂಡೇಷನ್ಗೆ ವಹಿಸಿದರೆ ಫೌಂಡೇಷನ್ ವೆಚ್ಚದಲ್ಲಿ ಆಸ್ಪತ್ರೆಗೆ ಎಲ್ಲ ಉಪಕರಣ ಒದಗಿಸಿ ಕರೊನಾ ಚಿಕಿತ್ಸೆಗೆ ಅಗತ್ಯವಾದ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸಿ ಚಿಕಿತ್ಸೆ ನೀಡುವುದಾಗಿ ಸುಧಾಮೂರ್ತಿ ವರು ಕೋರಿದರು ಎಂದು ಸಚಿವರು ಹೇಳಿದರು.
ಕರೊನಾಗೆ ಚಿಕಿತ್ಸೆ ನೀಡುವ ಬಗ್ಗೆ ಸುಧಾಮೂರ್ತಿ ಅವರು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರ ಜತೆ ಕೂಡ ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಸರ್ಕಾರ ಇನ್ಫೋಸಿಸ್ ಫೌಂಡೇಶನ್ಗೆ ಆಸ್ಪತ್ರೆ ವಹಿಸುವ ಬಗ್ಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುಧಾಮೂರ್ತಿ ಅವರ ಈ ಈ ಹೃದಯವಂತಿಕೆಯಿಂದ ನನ್ನ ಹೃದಯ ತುಂಬಿತು. ನಿಜವಾದ ಮಾತೃಕಾಳಜಿ ಈ ಮಹಾತಾಯಿಯದು ಎಂದು ಸಚಿವ ಸುರೇಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.