More

    ಉತ್ತರ ಪ್ರದೇಶ ಸರ್ಕಾರ ಕ್ರಮಕ್ಕೆ ಸುಪ್ರೀಂನಲ್ಲಿ ಹಿನ್ನಡೆ

    ನವದೆಹಲಿ: ಸಿಎಎ ವಿರೋಧಿ ಪ್ರತಿಭಟನಾಕಾರರ ಫೋಟೋ ಸಹಿತ ಮಾಹಿತಿ ಒಳಗೊಂಡಿರುವ ಫ್ಲೆಕ್ಸ್​ಗಳನ್ನು ಹಾಕಿರುವ ಕ್ರಮವನ್ನು ಯಾವುದೇ ಕಾನೂನು ಬೆಂಬಲಿಸುವುದಿಲ್ಲ ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹೇಳಿದೆ.

    ಫ್ಲೆಕ್ಸ್​ಗಳನ್ನು ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ರಜಾ ಅವಧಿಯ ಪೀಠ, ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಜತೆಗೆ ಪ್ರಕರಣವನ್ನು ಮೂವರು ಸದಸ್ಯರ ಪೀಠಕ್ಕೆ ವರ್ಗಾಯಿಸಿದೆ. ಸರ್ಕಾರದ ಪರ ಕೋರ್ಟ್​ಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಲ್ಲ ಕಾನೂನು ಪ್ರಕ್ರಿಯೆಗಳ ನಂತರವೇ ಫ್ಲೆಕ್ಸ್​ಗಳನ್ನು ಹಾಕಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದ ಕಡತಗಳನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.ಎ. ಬೊಬ್ಡೆ ಅವರ ಮುಂದಿಡಬೇಕು. ಮುಂದಿನ ವಾರ ಪ್ರಕರಣವನ್ನು ಆಲಿಸಲು ನ್ಯಾಯಪೀಠವನ್ನು ಅವರು ರಚಿಸಬಹುದು ಎಂದು ರಿಜಿಸ್ಟ್ರಿಗೆ ಸೂಚಿಸಿತು.

    ಪ್ರಕರಣ ವಿಚಾರಣೆಯನ್ನು ವಿಸõತ ಪೀಠಕ್ಕೆ ವರ್ಗಾಯಿಸಿರುವುದರಿಂದ ಸದ್ಯಕ್ಕೆ ಹಾಕಲಾಗಿರುವ ಫ್ಲೆಕ್ಸ್​ಗಳನ್ನು ತೆರವುಗೊಳಿಸುವುದಿಲ್ಲ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಸಿಎಎ ವಿರೋಧಿಸಿ ಉತ್ತರಪ್ರದೇಶದ ವಿವಿಧೆಡೆ ಸಾರ್ವಜನಿಕ ಆಸ್ತಿ ಧ್ವಂಸಗೊಳಿಸಿದ್ದ ಸುಮಾರು 53 ಆರೋಪಿಗಳ ಫೋಟೋ, ಮಾಹಿತಿ ಇರುವ ಫ್ಲೆಕ್ಸ್​ಗಳನ್ನು ಲಖನೌ ಜಿಲ್ಲಾಡಳಿತ ನಗರದಾದ್ಯಂತ ಹಾಕಿತ್ತು. ಅಲಹಾಬಾದ್ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ, ಫ್ಲೆಕ್ಸ್​ಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.

    ಈಶಾನ್ಯ ದೆಹಲಿ ಹಿಂಸಾಚಾರ; ಕುಮ್ಮಕ್ಕು ನೀಡಿದ ಆರೋಪದಡಿ ಪಿಎಫ್​ಐ ಅಧ್ಯಕ್ಷ ಫರ್ವೇಜ್​, ಕಾರ್ಯದರ್ಶಿ ಇಲಿಯಾಸ್​ ಅರೆಸ್ಟ್​

    ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಲಿದ್ದಾರಾ ತಲೈವಾ? ರಾಜಕೀಯಕ್ಕೆ ಇಳಿಯುವುದನ್ನು ದೃಢಪಡಿಸಿದ ನಟ ರಜನೀಕಾಂತ್ ನಿಲುವು ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts