ಬೆಳ್ತಂಗಡಿ: ಮುಂಡಾಜೆ ಪ್ಯಾಕ್ಸ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತ್ಯುಂಜಯ ರೈತ ಸೇವಾ ಕೂಟ ಮುಂಡಾಜೆ, ಅನುಗ್ರಹ ರೈತ ಸೇವಾ ಕೂಟ ಕಕ್ಕಿಂಜೆ, ಸಂಪದ ರೈತ ಸೇವಾ ಕೂಟ ನೆರಿಯ ಹಾಗೂ ಸಂಗಮ ರೈತ ಸೇವಾ ಕೂಟ ಕಲ್ಮಂಜ ಸಹಭಾಗಿತ್ವದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಕ್ಕಿಂಜೆ ಶಾಖೆಯಲ್ಲಿ ಕೃಷಿಕರಿಗಾಗಿ ಮಾಹಿತಿ ಕಾರ್ಯಾಗಾರ ಸೋಮವಾರ ನಡೆಯಿತು.
ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ಪ್ರಕಾಶನಾರಾಯಣ, ನಿರ್ದೇಶಕರು, ಸಿಇಒ ಚಂದ್ರಕಾಂತ ಪ್ರಭು ಉಪಸ್ಥಿತರಿದ್ದರು.
ಇಫ್ರೋ ಸಂಸ್ಥೆಯ ಅಧಿಕಾರಿ ಜಗದೀಶ್, ಕೃಷಿತಜ್ಞ ನಾಗೇಶ್ ಪಿ., ತರಕಾರಿ ಬೆಳೆಗಾರ ನಾಗರಾಜ ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.