ವಿಜಯವಾಣಿ ಸುದ್ದಿಜಾಲ ಸುಳ್ಯ
ಕಾಫಿ ಬೆಳೆಯಲು ಸುಳ್ಯದ ಮಣ್ಣು ಕೂಡ ಬಹಳ ಸೂಕ್ತವಾಗಿದ್ದು, ಆದರೆ ಸುಳ್ಯದವರು ಕಾಫಿಯನ್ನು ಅಂತರ್ ಬೆಳೆಯಾಗಿಸಲು ಮುಂದಾಗಬೇಕು ಎಂದು ಕೊಡಗು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಮಂಡಳಿಯ ವಿಜ್ಞಾನಿ ಡಾ.ಎಸ್.ಎ. ನದಾಫ್ ಸಲಹೆ ನೀಡಿದರು.
ಕನಕಮಜಲು ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂದ ಆಶ್ರಯದಲ್ಲಿ ಜಾಲ್ಸೂರು ಗ್ರಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾಫಿ ಬೆಳೆ ಹಾಗೂ ಉಪ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆ.ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಸಂಸ್ಥೆ ಮತ್ತು ಕನಕಮಜಲು ಸಹಕಾರ ಸಂಘ ವತಿಯಿಂದ ಹಣ್ಣಿನ ಗಿಡ ವಿತರಿಸಲಾಯಿತು.
ಕನಕಮಜಲು ಸಹಕಾರ ಸಂದ ಅಧ್ಯಕ್ಷ ಸುಧಾಕರ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ತೋಟಗಾರಿಕ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ. ಉಪ ಬೆಳೆಗಳ ಕುರಿತು ಮಾಹಿತಿ ನೀಡಿದರು. ಮಂಗಳೂರು ವಿಜಯ ಗ್ರಾಮಾಭಿವದ್ಧಿ ಪ್ರತಿಷ್ಠಾನದ ಸಿಇಓ ಜ್ಯೋತಿರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ಬ್ಯಾಂಕ್ ನಿವತ ಡಿಜಿಎಂ ಸುರೇಂದ್ರ ಹೆಗ್ಡೆ, ಪ್ರಮುಖರಾದ ವೀರಪ್ಪ ಗೌಡ ಕಣ್ಕಲ್, ಸಾವಿತ್ರಿ ಅಡ್ಕಾರುಬೈಲು, ಶಾರದಾ ಉಗ್ಗಮೂಲೆ, ವೇದಾ ಶೆಟ್ಟಿ ಬೊಳುಬೈಲು ಉಪಸ್ಥಿತರಿದ್ದರು. ಲೋಹಿತ್ ಕುದ್ಕುಳಿ ಸ್ವಾಗತಿಸಿದರು. ಯಶ್ವಿತ್ ಕಾಳಮ್ಮನೆ ಕಾರ್ಯಕ್ರಮ ನಿರೂಪಿಸಿದರು. ಜಾಲ್ಸೂರು ಗ್ರಾಪಂ, ಕನಕಮಜಲು ಗ್ರಾಪಂ, ವಿಜಯ ಗ್ರಾಮಾಭಿವದ್ಧಿ ಸಮಿತಿ, ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ, ಸುಳ್ಯ ರೈತ ಉತ್ಪಾದಕ ಕಂಪನಿ ಸಹಯೋಗ ವಹಿಸಿದ್ದವು.