ಮಸ್ಕಿಯ ಶಾಸಕರ ಕಚೇರಿ ಮುಂಭಾಗ ಎಸ್‌ಎಫ್‌ಐ ತಾಲೂಕು ಘಟಕ ಬುಧವಾರ ಪ್ರತಿಭಟನೆ ನಡೆಸಿತು. ಫೆಡರೇಷನ್ ತಾಲೂಕು ಅಧ್ಯಕ್ಷ ಬಸವಂತ ಹಿರೇಕಡಬೂರು, ಪ್ರಮುಖರಾದ ಪರಶುರಾಮ್, ನಾಗರಾಜ್, ಶಿವಪ್ಪ, ಯಂಕಪ್ಪ ಇನ್ನಿತರರಿದ್ದರು.  
ಜಿಲ್ಲೆ

ಬಡವರಿಗಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿ

ಮಸ್ಕಿ: ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲೂಕು ಘಟಕ ಪಟ್ಟಣದ ಶಾಸಕರ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿತು.

ಆಹಾರ ಪದಾರ್ಥ ಬೆಲೆಗಳು ಗಗನಕ್ಕೆ

ಮಸ್ಕಿಗೆ ಪ್ರತಿನಿತ್ಯ ವಿದ್ಯಾಭ್ಯಾಸಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಆಗಮಿಸುತ್ತಾರೆ. ಪ್ರಸ್ತುತ ಬೆಲೆ ಏರಿಕೆಯಿಂದ ಬಡಜನರು ತತ್ತರಿಸಿ ಹೋಗಿದ್ದಾರೆ. ಆಹಾರ ಪದಾರ್ಥ ಬೆಲೆಗಳು ಗಗನಕ್ಕೇರಿವೆ. ಹೀಗಾಗಿ ಬಡವರು ತೊಂದರೆ ಅನುಭವಿಸುವಂತಾಗಿದೆ. ಆದಷ್ಟು ಬೇಗ ಸೂಕ್ತವಾದ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಬಸವಂತ ಹಿರೇಕಡಬೂರು ಒತ್ತಾಯಿಸಿದರು.

ಶಾಸಕರ ಸಹೋದರ, ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರ್ವಿಹಾಳಗೆ ಮನವಿ ಪತ್ರ ಸಲ್ಲಿಸಿದರು.ಪೆಢರೇಶನ್ ಉಪಾಧ್ಯಕ್ಷ ಪರಶುರಾಮ್, ಪ್ರಮುಖರಾದ ನಾಗರಾಜ್, ಶಿವಪ್ಪ, ಯಂಕಪ್ಪ ಇನ್ನಿತರರಿದ್ದರು.