More

    ಇಂದಿರಾ ಕ್ಯಾಂಟೀನ್‌ಗೆ ಗ್ರಹಣ!

    ಬೆಳಗಾವಿ: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಬಲವರ್ಧನೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆದರೆ, ಐದು ವರ್ಷಗಳ ಹಿಂದೆ ಜಿಲ್ಲೆಗೆ ಮಂಜೂರಾಗಿದ್ದ 15 ಇಂದಿರಾ ಕ್ಯಾಂಟೀನ್‌ಗಳಲ್ಲಿ 6 ಕ್ಯಾಂಟೀನ್‌ಗಳು ಈವರೆಗೂ ಕಾರ್ಯಾರಂಭ ಮಾಡಿಲ್ಲ.

    ಅಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮಹತ್ವದ ಯೋಜನೆಯೊಂದು ಜಿಲ್ಲೆಯಲ್ಲಿ ಪರಿಪೂರ್ಣವಾಗದೇ ಕುಂಟುತ್ತ ಸಾಗಿದೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ 2017ರಲ್ಲಿ ರಾಜ್ಯಾದ್ಯಂತ ಆರಂಭವಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂ ಅವರೇ ಉದ್ಘಾಟಿಸಿ ಉಪಾಹಾರ ಸೇವನೆ ಮಾಡಿದ್ದರು. 2018ರಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಇಂದಿರಾ ಕ್ಯಾಂಟೀನ್‌ಗೆ ಅನುದಾನ ನೀಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂದಿದ್ದು, ಈ ಯೋಜನೆಗೆ ಬಲ ತುಂಬುತ್ತಿದೆ. ಇಂತಹ ಸಂದರ್ಭದಲ್ಲಿ ಈ ಮೊದಲು ಮಂಜೂರು ಮಾಡಿದ್ದ ಕಾಂಟೀನ್‌ಗಳನ್ನು ಕಾರ್ಯಾರಂಭಿಸುವುದರಲ್ಲಿ ಅಕಾರಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

    ಕಟ್ಟಡಗಳೇ ನಿರ್ಮಿಸಿಲ್ಲ: ಜಿಲ್ಲೆಗೆ ಮಂಜೂರಾದ 15 ಕ್ಯಾಂಟೀನ್‌ಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ಕ್ಯಾಂಟೀನ್‌ಗಳು ಕಾರ್ಯಾರಂಭದಲ್ಲಿವೆ. ಬೈಲಹೊಂಗಲ 1, ಸವದತ್ತಿ 1, ಗೋಕಾಕ ನಗರ ಸಭೆ ವ್ಯಾಪ್ತಿಯಲ್ಲಿ 1 ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಖಾನಾಪುರ, ಅಥಣಿ, ರಾಯಬಾಗ, ರಾಮದುರ್ಗ, ಹುಕ್ಕೇರಿ ಸೇರಿ 6 ಕ್ಯಾಂಟೀನ್‌ಗಳಿಗೆ ಕಟ್ಟಡಗಳೇ ನಿರ್ಮಾಣವಾಗಿಲ್ಲ. ಜಾಗದ ಕೊರತೆ, ಜಾಗದ ವ್ಯಾಜ್ಯಗಳಿಂದಾಗಿ ಐದು ವರ್ಷವಾದರೂ ಯೋಜನೆ ಇಲ್ಲಿ ಅನುಷ್ಠಾನವಾಗದ ಕಾರಣ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
    ಪೌರಾಡಳಿತ ನಿರ್ದೇಶನಾಲಯದಿಂದ ಟೆಂಡರ್: ರಾಜ್ಯ ಸರ್ಕಾರದ ಪೌರಾಡಳಿತ ನಿರ್ದೇಶನಾಲಯದಿಂದ ಇಂದಿರಾ ಕ್ಯಾಂಟೀನ್‌ಗಳ ಕಟ್ಟಡ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಿ, ಟೆಂಡರ್ ನೀಡಿದೆ. ಆ ವೇಳೆ ಜಾಗಗಳಿಗೆ ವ್ಯಾಜ್ಯಗಳಿರುವ ಬಗ್ಗೆ ಪರಿಶೀಲಿಸದೆ ಏಕಾಏಕಿ ಟೆಂಡರ್ ನೀಡಿದೆ. ಬಳಿಕ ಜಾಗದ ಮಾಲೀಕರು ತಕರಾರು ತೆಗೆದಿದ್ದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿವೆ. ಪರ್ಯಾಯ ಜಾಗ ಹುಡುಕಿ ಕ್ಯಾಂಟೀನ್ ಕಟ್ಟಡ ನಿರ್ಮಿಸಬೇಕಿದ್ದ ಅಕಾರಿಗಳು ಕೈಕಟ್ಟಿ ಕುಳಿತಿದ್ದು, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ.

    ವರದಿ ನಂತರ ಬಿಲ್ ಪಾಸ್

    ಈಗಾಗಲೇ ಕಾರ್ಯಾರಂಭದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ 500 ಉಪಾಹಾರ, 500 ಮಧ್ಯಾಹ್ನದ ಊಟ ಹಾಗೂ ರಾತ್ರಿ 500 ಊಟಗಳನ್ನು ಜನರು ಸವಿಯುತ್ತಾರೆ. ಟೆಂಡರ್ ಪಡೆದವರಿಗೆ 1 ಉಪಾಹಾರಕ್ಕೆ ಸರ್ಕಾರ 11.95 ರೂ. ಹಾಗೂ ಊಟಕ್ಕೆ 22.40 ರೂ. ನಿಗದಿ ಮಾಡಲಾಗಿದೆ. ಟೆಂಡರ್ ಪಡೆದವರು ಉಪಾಹಾರಕ್ಕೆ ಸಾರ್ವಜನಿಕರಿಂದ 5 ರೂ. ಪಡೆಯುತ್ತಾರೆ. ಸರ್ಕಾರ 6.95 ರೂ. ನೀಡುತ್ತದೆ. ಊಟಕ್ಕೆ ಗುತ್ತಿಗೆದಾರರು ಸಾರ್ವಜನಿಕರಿಂದ 10 ರೂ. ಪಡೆಯುತ್ತಾರೆ. ಸರ್ಕಾರ 12.40 ರೂ. ನೀಡುತ್ತಿದೆ. ಪ್ರತಿ ತಿಂಗಳು ಗುತ್ತಿಗೆದಾರರು ನೀಡುವ ಬಿಲ್ ಅನ್ನು ಪಾಲಿಕೆ ಆರೋಗ್ಯ ನಿರೀಕ್ಷಕರು ಪರಿಶೀಲಿಸಿ ಸರ್ಕಾರಕ್ಕೆ ವರದಿ ಕಳುಹಿಸಿದ ಬಳಿಕ ಬಿಲ್ ಆಗುತ್ತದೆ.

    ಪರಿಶೀಲನೆಗೆ ಮುಂದಾದ ಸಿಎಂ

    ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಜನಪ್ರಿಯವಾಗಿತ್ತು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 175 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ ಹಲವು ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ಹಿಡಿದು ಗ್ರಾಹಕರ ಲೆಕ್ಕ ಕೊಡುವ ವಿಚಾರದಲ್ಲೂ ಈ ಹಿಂದೆ ಹಲವು ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಇರುವ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿ ಪರಿಶೀಲಿಸಲು ಮುಂದಾಗಿದ್ದಾರೆ.

    ಜಿಲ್ಲೆಗೆ ಮಂಜೂರಾಗಿರುವ ಇಂದಿರಾ ಕ್ಯಾಂಟಿನ್‌ಗಳ ಪೈಕಿ ಕೆಲವು ಕ್ಯಾಂಟಿನ್‌ಗಳು ಏಕೆ ಕಾರ್ಯಾರಂಭವಾಗಿಲ್ಲ ಎಂಬ ಬಗ್ಗೆ ಅಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾದರೂ ಸಮಸ್ಯೆಗಳಿದ್ದರೆ ಸಂಬಂಸಿದ ಅಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ವಹಿಸುತ್ತೇವೆ.
    | ನಿತೇಶ ಪಾಟೀಲ ಬೆಳಗಾವಿ ಜಿಲ್ಲಾಕಾರಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts