More

    ನಾಳೆ ವರ್ಷದ ಕೊನೆಯ ಗ್ರಹಣ: ಆಪತ್ತು ಕಾದಿದೆಯೇ? ಯಾರ್ಯಾರಿಗೆ ಅಪಾಯಕಾರಿ?

    ಬೆಂಗಳೂರು: ಪ್ರತಿ ಗ್ರಹಣದ ಸಂದರ್ಭದಲ್ಲೂ ಒಂದಷ್ಟು ಕಿವಿಮಾತುಗಳು ಕೇಳಿಬರುತ್ತವೆ. ಗ್ರಹಣದೋಷ ನಿವಾರಣೆಗಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶಾಂತಿ-ಹೋಮಗಳು ಕೂಡ ನಡೆಯುತ್ತವೆ. ಅದರಲ್ಲೂ ಈ ಸಲದ ಗ್ರಹಣದಿಂದ ಆಪತ್ತು ಕಾದಿದೆ ಎಂಬ ಸಂಗತಿಯೊಂದು ಹೊರಬಿದ್ದಿದೆ.

    ಸಾಮಾನ್ಯವಾಗಿ ಪ್ರತಿ ಗ್ರಹಣದ ಸಂದರ್ಭದಲ್ಲೂ ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು, ಗ್ರಹಣದ ನಂತರ ಸ್ನಾನ ಮಾಡಬೇಕು ಎಂಬುದು ಮೊದಲಿನಿಂದಲೂ ಕೇಳಿಬರುತ್ತಿರುವ ಸಲಹೆ ಹಾಗೂ ಹಲವರು ಪಾಲಿಸುತ್ತಿರುವ ಪದ್ಧತಿ.

    ಅದರಲ್ಲೂ ಗ್ರಹಣ ಗರ್ಭಿಣಿಯರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಎನ್ನುವ ಮಾತೂ ಇದೆ. ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಹೊರಗೆ ಹೋಗಬಾರು, ಯಾವುದನ್ನೂ ಕತ್ತರಿಸುವ, ಹೊಲಿಯುವ ಕೆಲಸ ಮಾಡಬಾರದು. ಅವರು ಹರಿತವಾದ ವಸ್ತುಗಳನ್ನು ಹಿಡಿದುಕೊಳ್ಳುವುದು ಗಾಯಕ್ಕೆ ಕಾರಣವಾಗಬಹುದು, ಮಗುವಿಗೂ ಅಪಾಯ ತರಬಹುದು ಎಂದೂ ಹೇಳಲಾಗುತ್ತಿದೆ.

    ಇದನ್ನೂ ಓದಿ: ನಾಳೆ ಚಂದ್ರಗ್ರಹಣ: ವರ್ಷದ ಕೊನೆಯ ಗ್ರಹಣ ಯಾವಾಗ ಶುರು, ಎಷ್ಟು ಹೊತ್ತು ಇರಲಿದೆ?

    ಇನ್ನು ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು ಎಂಬುದು ಕೂಡ ಪ್ರತಿ ಗ್ರಹಣ ಸಂದರ್ಭದಲ್ಲಿ ಕೇಳಿಬರುವ ಸಾಮಾನ್ಯ ಸಲಹೆ. ಗ್ರಹಣಕ್ಕೂ ಮೊದಲು ನೀರು ಹಾಗೂ ಆಹಾರದಲ್ಲಿ ತುಳಸಿದಳ ಹಾಕಿಡಬೇಕು. ಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಬೇಕು ಎಂಬ ಸಲಹೆ ಕೂಡ ಇದೆ.

    ಅದರಲ್ಲೂ ಈ ತಿಂಗಳಲ್ಲಿ ಎರಡು ಗ್ರಹಣ ಬಂದಿರುವುದು ಆಪತ್ತು ತರಲಿದೆ, ದೇಶದ ಗಣ್ಯರಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಅನಿರುದ್ಧ್ ಕುಮಾರ್ ಮಿಶ್ರಾ ಎಂಬ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.

    ‘ಪ್ರೀತಿಯ ಭಾರತದ ಪ್ರಧಾನಮಂತ್ರಿಯವರೇ.. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಬರಲಿವೆ, ನಿಮ್ಮ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ಸಹಾಯಕನ ವೇಷದಲ್ಲಿರುವ ಕೆಲವರು ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಾರೆ ಮತ್ತು ನಿಮಗೆ ಹಾನಿ ಮಾಡಲು ಸಹ ಪ್ರಯತ್ನಿಸಬಹುದು. ಜಾಗರೂಕರಾಗಿರಿ..’ ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಆ ಬಳಿಕ ಗ್ರಹಣದ ಹಿನ್ನೆಲೆಯಲ್ಲಿ ಅಪಾಯದ ಕುರಿತು ಅವರು ಇನ್ನೊಮ್ಮೆ ಎಚ್ಚರಿಸಿದ್ದಾರೆ. ಅಕ್ಟೋಬರ್​ನಲ್ಲಿ ಎರಡು ಗ್ರಹಣಗಳ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರಿಗೆ ಇದು ದುರದೃಷ್ಟಕರ ಅವಧಿಯಾಗಿದೆ. ಈಗಿನಿಂದ ಮುಂದಿನ ಮಾರ್ಚ್ ವರೆಗೆ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರ ಭದ್ರತೆಯನ್ನು ಬಲಗೊಳಿಸಬೇಕು ಎಂದೂ ಅನಿರುದ್ಧ್​ ಭವಿಷ್ಯ ಹೇಳಿದ್ದಾರೆ.

    ಇದೊಂದಿದ್ರೆ ಸಾಕು, ಬ್ಯಾಂಕ್​ ಖಾತೆಯೇ ಬೇಕಾಗಿಲ್ಲ: ಹಣ ಪಾವತಿ-ಸ್ವೀಕೃತಿ ಎಲ್ಲವೂ ಬ್ಯಾಂಕ್ ಅಕೌಂಟ್ ಇಲ್ಲದೆಯೂ ಸಾಧ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts