More

    ನಾಳೆ ಚಂದ್ರಗ್ರಹಣ: ವರ್ಷದ ಕೊನೆಯ ಗ್ರಹಣ ಯಾವಾಗ ಶುರು, ಎಷ್ಟು ಹೊತ್ತು ಇರಲಿದೆ?

    ಬೆಂಗಳೂರು: ಈ ವರ್ಷದ ಕೊನೆಯ ಗ್ರಹಣವಾಗಿರುವ ಚಂದ್ರಗ್ರಹಣ ನಾಳೆ ಸಂಭವಿಸಲಿದ್ದು, ಅದು ಎರಡು ದಿನಗಳಲ್ಲಿ ಗೋಚರಿಸಲಿದೆ. ಅರ್ಥಾತ್, ಅ. 28 ಮತ್ತು 29ರಂದು ಈ ಗ್ರಹಣದ ಗೋಚರ ಆಗಲಿದೆ. ಇತ್ತೀಚೆಗಷ್ಟೇ ಕಾಣಿಸಿಕೊಂಡ ಸೂರ್ಯಗ್ರಹಣದ ಎರಡು ವಾರಗಳ ಬಳಿಕ ಈ ಚಂದ್ರಗ್ರಹಣ ಸಂಭವಿಸುತ್ತಿದೆ.

    ಭಾರತದಲ್ಲಿ ನಾಳೆ ರಾತ್ರಿ 11.31ಕ್ಕೆ ಆರಂಭವಾಗಲಿರುವ ಈ ಭಾಗಶಃ ಚಂದ್ರಗ್ರಹಣ, ಬೆಳಗಿನ ಜಾವ 3.36 ಹಾಗೆ ಕೊನೆಯಾಗಲಿದೆ. ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದ್ದು, ಅದು ಅ. 29ರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ನಾಳಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.

    ಏನಿದು ಚಂದ್ರಗ್ರಹಣ?: ನಾಸಾ ಮಾಹಿತಿ ಪ್ರಕಾರ, ಚಂದ್ರಗ್ರಹಣ ಹುಣ್ಣಿಮೆಯಂದು ಸಂಭವಿಸುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಉಂಟಾಗುತ್ತದೆ. ಚಂದ್ರ ಮಸುಕಾಗಿ ಕಾಣುತ್ತ ಬಳಿಕ ಕ್ರಮೇಣ ಕೆಂಪಾಗುವುದು ಚಂದ್ರಗ್ರಹಣದ ಸಂದರ್ಭದಲ್ಲಿ ನಡೆಯುತ್ತದೆ.

    ಹುಲಿ ಉಗುರು: ಏನಿದರ ಧರಿಸುವಿಕೆ ಹಿಂದಿನ ಅಸಲಿಯತ್ತು? ನಕಲಿ ಶೋಕಿಯೋ, ಬಚಾವಾಗೋ ಕರಾಮತ್ತೋ?

    ಇದೊಂದಿದ್ರೆ ಸಾಕು, ಬ್ಯಾಂಕ್​ ಖಾತೆಯೇ ಬೇಕಾಗಿಲ್ಲ: ಹಣ ಪಾವತಿ-ಸ್ವೀಕೃತಿ ಎಲ್ಲವೂ ಬ್ಯಾಂಕ್ ಅಕೌಂಟ್ ಇಲ್ಲದೆಯೂ ಸಾಧ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts