ಹಳೆಯಂಗಡಿ: ಭಾರತದ ಏಕೈಕ ಅಂತಾರಾಷ್ಟ್ರೀಯ ಸ್ಟಾೃಂಡ್-ಅಪ್ ಪ್ಯಾಡಲ್(ಎಸ್‌ಯುಪಿ) ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025ರ ಎರಡನೇ ಆವೃತ್ತಿ ಮಾ.7ರಿಂದ 9ರವರೆಗೆ ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ. ಕ್ರಿಶ್ಚಿಯನ್ ಆಂಡರ್ಸನ್, ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ, ನಾಲ್ಕು ಬಾರಿ ವಿಶ್ವ ಚಾಂಪಿಯನ್ ಮತ್ತು ಡಿಫೆಂಡಿಂಗ್ ವಿಮೆನ್ಸ್ ಚಾಂಪಿಯನ್ ಆಗಿರುವ ಎಸ್ಪೆರಾಂಜ ಬರ‌್ರೆರಸ್ ಭಾಗವಹಿಸಲಿದ್ದಾರೆ. ಭಾರತವನ್ನು ಮುನ್ನಡೆಸುವ ಜವಾಬ್ದಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಶೇಕರ್ ಪಚ್ಚೈ ವಹಿಸಿಕೊಂಡಿದ್ದಾರೆ. ಮೂರು ದಿನದ ಅಂತಾರಾಷ್ಟ್ರೀಯ ಕಾರ್ಯಕ್ರಮ ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮಂತ್ರ ಸರ್ಫ್ ಕ್ಲಬ್, ಸಹಯೋಗದೊಂದಿಗೆ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ರೇಸಿಂಗ್, ಲೈವ್ ಸಂಗೀತ ಪ್ರದರ್ಶನ ಮತ್ತು ರೋಮಾಂಚಕ ಸಾಂಸ್ಕೃತಿಕ ಉತ್ಸವ ಇರಲಿದೆ.