ಅಳವಂಡಿಯಲ್ಲಿ ಡಾ.ಬಾಬು ಜಗಜೀವನರಾಮ್ ಜನ್ಮ ದಿನವನ್ನು ಆಚರಿಸಲಾಯಿತು. ಕೃಷಿ ಅಧಿಕಾರಿ ಬಿ.ಎಂ.ಗೊಬ್ಬರಗುಂಪಿ, ಪ್ರಮುಖರಾದ ಶಂಕರಪ್ಪ ಮೇಟಿ, ಧರ್ಮಣ್ಣ, ಸುರೇಶ ವಾಸ್ತೆ, ಈರಪ್ಪ ಬಾಣಾಪುರ, ಭರಮಪ್ಪ ಇತರರಿದ್ದರು. 
ಜಿಲ್ಲೆ

ಭಾರತಕ್ಕೆ ವಿದೇಶಿ ಕೃಷಿ ತಂತ್ರಜ್ಞಾನ ಪರಿಚಯ

Kopala - Desk - Eraveni

ಅಳವಂಡಿ: ದೇಶದಲ್ಲಿ ಆಹಾರ ಕೊರತೆ ನೀಗಿಸಲು ಹಸಿರು ಕ್ರಾಂತಿ ಯೋಜನೆ ಜಾರಿಗೊಳಿಸಿದ ನಾಯಕನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಬಿ.ಎಂ.ಗೊಬ್ಬರಗುಂಪಿ ಹೇಳಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ನಡೆದ ಡಾ.ಬಾಬು ಜಗಜೀವನರಾಮ್ 177ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ವ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕ.

ಕೃಷಿ ಸಚಿವರಿದ್ದಾಗ ವಿದೇಶದಲ್ಲಿನ ಕೃಷಿಯ ನವೀನ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿ, ಹಸಿರು ಕ್ರಾಂತಿ ಸೃಷ್ಟಿಸುವ ಮೂಲಕ ಆಹಾರ ಕೊರತೆ ನೀಗಿಸಿದ್ದಾರೆ ಎಂದರು. ಪ್ರಮುಖರಾದ ಶಂಕರಪ್ಪ ಮೇಟಿ, ಧರ್ಮಣ್ಣ, ಸುರೇಶ ವಾಸ್ತೆ, ಈರಪ್ಪ ಬಾಣಾಪುರ, ಭರಮಪ್ಪ ಇತರರಿದ್ದರು.