ಬೆಂಗಳೂರು: ಕೇಕ್ ಎಂದರೆ ಯಾರ ಬಾಯಲ್ಲಿ ನೀರು ಬರಲ್ಲ ? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ಅಪರೂಪದ ತಿನಿಸು ಕೇಕ್. ಇದೇ ಡಿ.12ರಿಂದ ಬೆಂಗಳೂರಿನಲ್ಲಿ ಬೃಹತ್ ಕೇಕ್ ಹಬ್ಬ ನಡೆಯಲಿದೆ. ಇಂಡಿಯಾ ಬೇಕ್ ಶೋ ದ 5ನೇ ಆವೃತ್ತಿಯು ಡಿ.12 ರಿಂದ 15 ರವರೆಗೆ ಜೆಪಿ ನಗರದ ಎಂಎಲ್‌ಆರ್ ಕನ್ವೆನ್ಷನ್ ಕೇಂದ್ರದಲ್ಲಿ ನಡೆಯಲಿದೆ. ಬೇಕಿಂಗ್ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಉತ್ಸಾಹಿಗಳು, ವೃತ್ತಿಪರರು ಕೇಕ್ ಹಬ್ಬದಲ್ಲಿ ಪಾಲ್ಗೊಳ್ಳಬಹುದು. ಈ ಅತ್ಯಾಕರ್ಷಕ ಮೂರು ದಿನಗಳ ಕೇಕ್ ಶೋ ಸಂಭ್ರಮವನ್ನು ಹೋಮ್ ಬೇಕರ್ಸ್.ಕೋ.ಇನ್ ಆಯೋಜಿಸಿದೆ.
ಬೇಕಿಂಗ್ ಕಲೆ, ಸಕ್ಕರೆಯ ವಿವಿಧ ವಿನ್ಯಾಸಗಳ ಅತ್ಯುತ್ತಮ ಅನುಭವವನ್ನು ಕೇಕ್ ಪ್ರಿಯರಿಗೆ ಮೇಳದಲ್ಲಿ ನೀಡಲಾಗುತ್ತದೆ.
ಇಂಡಿಯಾ ಬೇಕ್ ಶೋ ಕೇವಲ ಒಂದು ಮನರಂಜನೆಯ ಕಾರ್ಯಕ್ರಮವಾಗಿರದೆ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಬೇಕಿಂಗ್ ಶಿಕ್ಷಣವನ್ನು ಸಮಾಜಕ್ಕೆ ನೀಡುವುದರ ಜೊತೆಗೆ ಎಲ್ಲಾ ಹಂತಗಳ ಬೇಕರ್ಸ್‌ಗಳನ್ನು ಒಂದೇ ವೇದಿಕೆಗೆ ಕರೆತರಲಾಗುವುದು. ಇದರಿಂದ ಪರಸ್ಪರ ಜ್ಞಾನ ವಿನಿಮಯ ಮತ್ತು ಬೆಳವಣಿಗೆ ಮತ್ತುಷ್ಟು ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಕೇಕ್ ಪ್ರದರ್ಶನದಲ್ಲಿ ತಯಾರಿಸುವ ಕೇಕ್‌ಗಳನ್ನು ರಾಬಿನ್ ಹುಡ್ ಆರ್ಮಿ ಮೂಲಕ ದುರ್ಬಲ ಮಕ್ಕಳಿಗೆ ದಾನ ನೀಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕಿ ಅಂಜನಾ ಲಾತ್ ತಿಳಿಸಿದ್ದಾರೆ. ಕೇಕ್ ಶೋ ನಲ್ಲಿ ಪಾಲ್ಗೊಳ್ಳುವುದಕ್ಕೆ ಆಸಕ್ತಿ ಉಳ್ಳವರು ಹೆಚ್ಚಿನ ಮಾಹಿತಿಗೆ ದೂ : 98440 06736 ಸಂಪರ್ಕಿಸಬಹುದು.