ಸಿಂಧನೂರು: ಪಠ್ಯದ ಚೆನ್ನಭೈರವಿ ನಾಟಕದಲ್ಲಿ ಅಭಿನಯಿಸುವುದು ಕಷ್ಟವಿದೆ. ಆದರೂ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಟಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಹೇಳಿದರು.
ಗುಂಜಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ನಟಿಸಿರುವ 9ನೇ ತರಗತಿ ಪಠ್ಯದ ಚೆನ್ನಭೈರವಿದೇವಿ ನಾಟಕ ವೀಕ್ಷಿಸಿ ಮಾತನಾಡಿದರು. ನಾಟಕದಿಂದ ಮಕ್ಕಳಲ್ಲಿ ಒಳ್ಳೆಯ ಭಾವನೆಗಳು ಮೂಡಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಓದಿನ ಕಡೆ ಲಕ್ಷವಹಿಸಿ, ಫಲಿತಾಂಶದಲ್ಲಿ ಸಾಧಿಸಬೇಕೆಂದು ತಿಳಿಸಿದರು. ಮುಖ್ಯಶಿಕ್ಷಕ ನಾಗಪ್ಪ ಬೇರ‌್ಗಿ, ಸಹಶಿಕ್ಷಕರಾದ ಬಸವರಾಜ, ನಜೀರ್‌ಅಹ್ಮದ್, ಅನಿತಾ ಎಸ್., ಮಧುಶ್ರೀ, ನಾಗರಾಜ, ಮಲ್ಲಿಕಾರ್ಜುನ, ವಿರೂಪಾಕ್ಷಿ, ಎಸ್‌ಡಿಎ ಮಹಾಂತೇಶ ಇದ್ದರು.