ತಾವರಗೇರಾ: ಸ್ವಾತಂತ್ರೃ ದಿನಾಚರಣೆ ದಿನ ಸಾರ್ವಜನಿಕ ಧ್ವಜಾರೋಹಣ ನಂತರ ನಡೆಯುವ ಸಭೆಯಲ್ಲಿ, ನಿವೃತ್ತ ಯೋಧರಿಗೆ ಮತ್ತು ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ.ಪಂಯಿಂದ ಸನ್ಮಾನ ಮಾಡಬೇಕು ಎಂದು ಕುಷ್ಟಗಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಹೇಳಿದರು.
ಇದನ್ನೂ ಓದಿ:ಸ್ವಾತಂತ್ರೃಪೂರ್ವದ ಸರ್ಕಾರಿ ಶಾಲೆ ಪುನಾರಂಭ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿಯಲ್ಲಿ ಗುರುವಾರ ಮಾತನಾಡಿದರು.
ಪ.ಪಂ.ಮುಖ್ಯಾಧಿಕಾರಿ ನಬಿಸಾಬ ಖುದನವರ ಮಾತನಾಡಿ, ಸಾರ್ವಜನಿಕ ಧ್ವಜಾರೋಹಣ ನಂತರ ಮಕ್ಕಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯುತ್ತಾದೆ. ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳು ಭಾಗವಹಿಸಬೇಕು ಎಂದರು.
ಮುಖ್ಯ ಶಿಕ್ಷಕರುಗಳಾದ ಡಾ.ಸುಭಾಷ್ ಪೋರೆ, ಮಲ್ಲಿಕಾರ್ಜುನ ಸೂಡಿ , ಪಂಪಾಪತಿ ಕೊರಲಿ, ಬಿ.ಆರ್.ಪಾಟೀಲ, ಅವರಡ್ಡಿ, ಅಜ್ಜಿ ನಾಗಲೀಕರ, ಪಿಎಸ್‌ಐ ಮಲ್ಲಪ್ಪ ವಜ್ರದ, ಪ.ಪಂ.ಸಿಬ್ಬಂದಿ ಶರಣಬಸವ ಸೈಂದರ್ ಇತರರಿದ್ದರು.