ಬೆಂಗಳೂರು: ಹಸಿರು ತಾಣದಲ್ಲಿ ನೆಮ್ಮದಿಯಾಗಿ ಸಮಯ ಕಳೆಯಲು ಬಯಸುವವರಿಗೆ ಫಾರ್ಮ್ ಹೌಸ್ ಉತ್ತಮವಾಗಿ ಪರಿಣಮಿಸಿದೆ. ಈ ಕಾರಣ ನಗರದಾಚೆಯ ಫಾಮ್ರ್ ಹೌಸ್ಗಳಿಗೆ ಸಾಕಷ್ಟು ಬೇಡಿಕೆ ಬರಲಾರಂಭಿಸಿದೆ. ಫಾರ್ಮ್ ಹೌಸ್ನಲ್ಲಿ ಫಲವತ್ತಾದ ಫಾರ್ಮ್ಲ್ಯಾಂಡ್ ಖರೀದಿಸಿ ಶ್ರೀಗಂಧ, ತೇಗ, ಹಣ್ಣು, ತರಕಾರಿ ಸೇರಿ ಇತರೆ ಬೆಳೆಗಳನ್ನು ಬೆಳೆದು ಆದಾಯದ ಜತೆಗೆ ನೆಮ್ಮದಿ ಕಾಣುವ ಟ್ರೆಂಡ್ ಶುರುವಾಗಿದೆ. ಅದರಂತೆ, ಯು.ಕೆ. ಪ್ರಾಪರ್ಟಿಸ್ ಮತ್ತು ಡೆವಲಪರ್ಸ್, ಹುಬ್ಬಳ್ಳಿ ಹಾಗೂ ಧಾರವಾಡ ಸುತ್ತಮುತ್ತ ಹತ್ತಾರು ಫಾರ್ಮ್ ಲ್ಯಾಂಡ್ ಯೋಜನೆ ಅಭಿವೃದ್ಧಿಪಡಿಸಿದೆ.
5, 10, 15 ಮತ್ತು 20 ಗುಂಟೆ ಭೂಮಿ ಕೈಗೆಟುಕುವ ದರದಲ್ಲಿ ದೊರೆಯಲಿದೆ. ಫಾರ್ಮ್ಲ್ಯಾಂಡ್ ಮೇಲೆ ಹೂಡಿಕೆ ಮಾಡುವವರಿಗೆ ಪ್ರತಿ ತಿಂಗಳು ಬಡ್ಡಿರಹಿತ ಕೇವಲ ಶೇ.1 ಪಾವತಿ ಆಫರ್ ಅನ್ನು ಯು.ಕೆ. ಪ್ರಾಪರ್ಟಿಸ್ ನೀಡುತ್ತಿದೆ. ಹುಬ್ಬಳ್ಳಿ ಹಾಗೂ ಧಾರವಾಡ ನಗರದಿಂದ ರಸ್ತೆಯಿಂದ ಕೇವಲ 20 ನಿಮಿಷ ಪ್ರಯಾಣದಲ್ಲಿ ಸಿಗುವ ಫಾರ್ಮ್ ಲ್ಯಾಂಡ್ಗಳು ಆಸ್ತಿ ಹೂಡಿಕೆಗೆ ಉತ್ತಮ ಪ್ರದೇಶವಾಗಿದೆ. ಇಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ತೋಟ ಮತ್ತು ಕೃಷಿಗೆ ಅತ್ಯುತ್ತಮ ಜಾಗವಾಗಿದೆ. ಫಾರ್ಮ್ ಲ್ಯಾಂಡ್ ಖರೀದಿಸಿದವರಿಗೆ ಸುಸಜ್ಜಿತ ರೆಸಾರ್ಟ್ ಸೌಲಭ್ಯವೂ ಸಿಗಲಿದೆ. ಹೂಡಿಕೆ ಮಾಡುವ ಮೂಲಕ ಹಲವು ಲಾಭ ಪಡೆಯಬಹುದು ಎಂದು ಯು.ಕೆ. ಪ್ರಾಪರ್ಟಿಸ್ ಮಾಲೀಕರು ಹೇಳುತ್ತಾರೆ. ಅಪಾರ್ಟ್ವೆುಂಟ್, ದುಬಾರಿ ಸೈಟ್ಗಳ ಮೇಲಿನ ಹೂಡಿಕೆಗಿಂತ ಈಗ ಫಾರ್ಮ್ಲ್ಯಾಂಡ್ಗಳ ಮೇಲಿನ ಹೂಡಿಕೆ ಲಾಭದಾಯಕವಾಗಿದೆ. ಈ ಕಾರಣ ಫಾರ್ಮ್ಲ್ಯಾಂಡ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದರು.
ಗೆಟೆಡ್ ಕಮ್ಯುನಿಟಿ ಫಾರ್ಮ್ಲ್ಯಾಂಡ್ಗಳು ಹುಬ್ಬಳ್ಳಿ-ಧಾರವಾಡ ನಗರಕ್ಕೆ ಹೊಂದಿಕೊಂಡಿವೆ. ಯು.ಕೆ. ಗ್ರೂಪ್ 30 ವರ್ಷಗಳ ಅನುಭವವುಳ್ಳ ನಂಬಿಕಸ್ಥ ಸಂಸ್ಥೆಯಾಗಿದೆ. ಯೋಜನೆಗಳು ಹುಬ್ಬಳ್ಳಿ ಧಾರವಾಡ ನಗರ ಸುತ್ತ ಕೇವಲ 20 ನಿಮಿಷದಲ್ಲಿ ಧಾರವಾಡದ ಗರಗ ರಸ್ತೆಯ ಟಾಟಾ ಮೋಟರ್ಸ್ ಹತ್ತಿರ, ಅರಣ್ಯ ಇಲಾಖೆ ಕಚೇರಿ, ಎಂ.ಎಂ. ಇಂಡಸ್ಟ್ರೀಸ್ ಹತ್ತಿರ, ಗೋವಾ ಮುಖ್ಯರಸ್ತೆ ಅಳ್ನಾವರ, ಮುಖ್ಯರಸ್ತೆ ಅಳ್ಳಾವರ ಹಾಗೂ ಹುಬ್ಬಳ್ಳಿಯ ಛಬ್ಬಿ, ವರೂರು, ಹೆಬಸೂರ ಇದೆ. ಕ್ಲಬ್ಹೌಸ್, ಕ್ರೀಡಾ ವಲಯ ಹೊಂದಿರುವುದು ಮತ್ತೊಂದು ವಿಶೇಷತೆ. ಕುಡಿಯುವ ನೀರು, ವಿದ್ಯುತ್, ಆಟದ ಮೈದಾನ, ಜಿಮ್ ಯೋಗ ಸೆಂಟರ್, ಮಕ್ಕಳಿಗಾಗಿ ಉದ್ಯಾನ, 30 ಅಡಿ ರಸ್ತೆ ಸೇರಿ ವಿಶ್ವದರ್ಜೆಯ ಸೌಲಭ್ಯಗಳಿವೆ. 24 ಗಂಟೆ ಭದ್ರತಾ ವ್ಯವಸ್ಥೆ ಇದೆ.
ಶ್ರೀಗಂಧ ಸೇರಿ ವಿವಿಧ ವಾಣಿಜ್ಯ ಬೆಳೆ ಬೆಳೆಸುವ ಅವಕಾಶವಿರುವ ಕೆಲವು ಫಾರ್ಮ್ಲ್ಯಾಂಡ್ಗಳು, ರೆಸಾರ್ಟ್ ಸೌಲಭ್ಯ ಕಲ್ಪಿಸಲಿದೆ. ಜತೆಗೆ ಅಲ್ಲಿ ಫಾರ್ಮ್ ಹೌಸ್ಗಳನ್ನೂ ಡೆವಲಪರ್ಗಳು ನಿರ್ವಿುಸಿ ಕೊಡುವುದು ಇನ್ನೊಂದು ವಿಶೇಷ. ಸಾಗವಾಣಿ, ಶ್ರೀಗಂಧ ಜತೆಗೆ ವಿವಿಧ ಹಣ್ಣಿನ ಗಿಡ ನೆಡಲಾಗುತ್ತಿದ್ದು, ಸಾವಯವ ಬೆಳೆ ಬೆಳೆಯಬಹುದು. ಇಂಥ ಫಾರ್ಮ್ಲ್ಯಾಂಡ್ಗಳ ಖರೀದಿ ಬೆಲೆ ಕೆಲ ವರ್ಷಗಳಲ್ಲಿ ದುಪ್ಪಟ್ಟಾಗುವುದು ಖಚಿತವಾಗಿರುವ ಕಾರಣ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರು ಸೇರಿ ಅನೇಕ ನಗರಗಳ ಜನರು ಫಾರ್ಮ್ ಹೌಸ್ ವಿಥ್ ಫಾಮ್ರ್ ಲ್ಯಾಂಡ್ ಮೇಲೆ ಹೂಡಿಕೆ ಮಾಡಿ ಲಾಭ ಗಳಿಸಲು ಮುಂದಾಗಿದ್ದಾರೆ. ‘ಫಾರ್ಮ್ ಹೌಸ್ ಬೇಡವೆಂದರೆ ಶ್ರೀಗಂಧದ ಗಿಡ ನೆಡುವ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಗೆ ಹತ್ತಿರ ಇರುವ ಫಾರ್ಮ್ಲ್ಯಾಂಡ್ ಲಾಭದಾಯಕವಾಗಿದೆ. ಈ ಭಾಗದಲ್ಲಿ ಮೂಲಸೌಕರ್ಯ ಯೋಜನೆಗಳು, ಬೃಹತ್, ಸಣ್ಣ ಕೈಗಾರಿಕೆಗಳು, ಇಂಡಸ್ಟ್ರಿಯಲ್ ಕ್ಲಸ್ಟರ್ಗಳು ಅಭಿವೃದ್ಧಿಗೊಳ್ಳುತ್ತಿವೆ. ಹುಬ್ಬಳ್ಳಿ-ಧಾರವಾಡ ಬೈಪಾಸ್, ನೂತನ ರಿಂಗ್ ರೋಡ್ ಕೂಡ ಅನುಕೂಲವಾಗಿ ಪರಿಣಮಿಸಿದೆ. ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ಮಾಣ ಯೋಜನೆಯಲ್ಲಿ ಅವಳಿ ನಗರದ ಸುತ್ತಮುತ್ತಲಿನ ಪ್ರದೇಶಗಳು ನಗರ ವ್ಯಾಪ್ತಿಗೆ ಬರಲಿದೆ.
ಹಸಿರು ತಾಣದಲ್ಲಿ ಸಮಯ ಕಳೆಯುವ ಜತೆಗೆ ಭವಿಷ್ಯದಲ್ಲಿ ಬಹುಕೋಟಿ ಆದಾಯ ತರುವ ಆಸ್ತಿ ಹೂಡಿಕೆಯಾಗಿಯೂ ಫಾರ್ಮ್ಲ್ಯಾಂಡ್ಗಳು ಗಮನ ಸೆಳೆದಿವೆ. ಶ್ರೀಗಂಧ ಬೆಳೆಸುವುದು ಜನರ ಹೊಸ ಕ್ರೇಜ್ ಆಗಿದ್ದು, ಇದರಲ್ಲಿ ಜನರು ತಮ್ಮ ಹಸಿರು ಪ್ರೀತಿ ಜೊತೆಗೆ ಸೂಕ್ತ ಗಳಿಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಸರ್ಕಾರಿ ಜಾಗ ಅಥವಾ ಅರಣ್ಯ ಪ್ರದೇಶದಲ್ಲಿರುವ ಗಂಧದ ಮರಗಳಿಗಷ್ಟೇ ಮಾತ್ರವಲ್ಲದೆ ಖಾಸಗಿ ಜಮೀನಿನಲ್ಲಿ ಬೆಳೆದಿರುವ ಗಂಧದ ಮರಗಳಿಗೆ ಪೊಲೀಸ್ ಕಾವಲು ನೀಡುವಂತೆ ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇದು ಫಾರ್ಮ್ಲ್ಯಾಂಡ್ನಲ್ಲಿ ಶ್ರೀಗಂಧ ಬೆಳೆಸುವವರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಯು.ಕೆ. ಪ್ರಾಪರ್ಟಿಸ್ ಮಾಲೀಕರು.
ನಿವೇಶನ ಖರೀದಿಸುವ ವಿಚಾರದಲ್ಲಿ ಗ್ರಾಹಕರಿಗೆ ಯಾವುದೇ ಗೊಂದಲವಾಗದಂತೆ ಯುಕೆಪಿ ಲೀಗಲ್ ತಂಡ ಹೊಂದಿದೆ. ಈ ತಂಡ ನ್ಯಾಯಸಮ್ಮತ ಮಾಹಿತಿ ಒದಗಿಸುತ್ತದೆ. ಹೂಡಿಕೆಗೆ ಸಲಹೆ, ವಾಸ್ತು ಇತರ ಮಾಹಿತಿಯನ್ನು ಸಕಾಲಕ್ಕೆ ಒದಗಿಸುವ ಸ್ಪಂದಿಸುವ ಕಾರ್ಯಕ್ಕೆ ಸಂಸ್ಥೆ ಮೊದಲ ಆದ್ಯತೆ ನೀಡುತ್ತದೆ. ಕುಟುಂಬದೊಂದಿಗೆ ಫಾರ್ಮ್ಲ್ಯಾಂಡ್ ವೀಕ್ಷಿಸಲು ಅವಕಾಶ ಇದೆ. ಸಂಪರ್ಕಕ್ಕೆ 77952 02999, 63663 5164 ಕರೆ ಮಾಡಬಹುದು.