ದೇವದುರ್ಗ ತಾಪಂ ಕಚೇರಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ, ಪ್ರಮುಖರಾದ ಬಸವರಾಜ ನಾಯಕ ಕಾಕರಗಲ್, ಮಲ್ಲಿಕಾರ್ಜುನ, ಶಿವಪ್ಪ, ತಾಯಮ್ಮ, ಅಸ್ಮೀರ್‌ಅಲಿ, ಜಾಫರ್‌ಸಾಬ್ ಇತರರಿದ್ದರು. 
ಜಿಲ್ಲೆ

ಅಸಮರ್ಥ ಪಿಡಿಒಗಳ ವಿರುದ್ಧ ಕ್ರಮವಾಗಲಿ

ರುದ್ರಪ್ಪ ವಾಲಿ

ವಿಜಯವಾಣಿ ಸುದ್ದಿಜಾಲ ದೇವದುರ್ಗ
ನರೇಗಾ ಯೋಜನೆ ಸಮರ್ಪಕ ಜಾರಿಗೊಳಿಸುವಲ್ಲಿ ವಿಫಲರಾಗಿರುವ ವಿವಿಧ ಗ್ರಾಪಂಗಳ ಅಸಮರ್ಥ ಪಿಡಿಒಗಳನ್ನು ಅಮಾನತು ಮಾಡಲು ಆಗ್ರಹಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ನೀಡದೆ ಪಿಡಿಒಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಗಬ್ಬೂರು, ರಾಮದುರ್ಗ, ಕಾಕರಗಲ್, ಕೊಪ್ಪರ, ರಾಮನಾಳ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರರಿಗೆ ಹಣ ನೀಡದೆ ಎನ್‌ಎಂಆರ್ ಜಿರೋ ಮಾಡುವ ಮೂಲಕ ಪಿಡಿಒಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಇದರಿಂದ ಕೂಲಿಕಾರರು ಕೆಲಸವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಗಬ್ಬೂರು, ಕಾಕರಗಲ್, ಕೊಪ್ಪರ, ಜಾಲಹಳ್ಳಿ ಗ್ರಾಮದ ಕೂಲಿಕಾರರಿಗೆ ಕೆಲಸ ನೀಡದ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕು. ಮಸರಕಲ್, ಗೆಜ್ಜೆಬಾವಿ ದೊಡ್ಡಿ ಕೂಲಿಕಾರರಿಗೆ ಕೆಲಸ ಮಾಡಿದ್ದು, ಡಿಮಾಂಡ್ ಹಾಕಿ ಕೂಲಿ ಪಾವತಿ ಮಾಡಬೇಕು.

ಜಾಲಹಳ್ಳಿ, ಕಾಕರಗಲ್, ಗಣೇಕಲ್, ದೊಂಡಂಬಳಿ, ಪಲಕನಮರಡಿ ಡಿಲಿಟ್ ಆಗಿರುವ ಜಾಬ್ ಕಾರ್ಡ್‌ಗಳನ್ನು ಸರಿಪಡಿಸಬೇಕು. ಕೂಸಿನಮನೆ ನಿರ್ವಹಣೆ ಮಾಡುತ್ತಿರುವ ಕೇರ್ ವರ್ಕರ್ಸ್ ಕೂಲಿಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.