ಮೂಳೂರು ಬಿಲ್ಲವರ ಸಂಘದ ಮುಂಭಾಗದ ಉದಯ್ ಪೂಜಾರಿ ಎಂಬುವರ ಮನೆಗೆ ಮರಬಿದ್ದು ಹಾನಿಯುಂಟಾಗಿದೆ. 
ಜಿಲ್ಲೆ

ಕಾಪು ತಾಲೂಕಿನಲ್ಲಿ ನಿರಂತರ ಮಳೆ: ಮನೆಗೆ ಮರ ಬಿದ್ದು ಅಪಾರ ಹಾನಿ

Vinod Kumar

ಪಡುಬಿದ್ರಿ: ಕಾಪು ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ನಿರಂತರ ಮಳೆಯಾಗುತ್ತಿದ್ದು, ತಗ್ಗುಪ್ರದೇಶಗಳು ಜಲಾವೃತವಾಗಿವೆ. ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನೆರೆಭೀತಿ ಎದುರಾಗಿದೆ.

ರಸ್ತೆಯಲ್ಲಿಯೇ ಹರಿದ ಮಳೆ ನೀರು

ತಾಲೂಕಿನಾದ್ಯಂತ ಮಳೆಗಾಲ ಮುಂಜಾಗ್ರತವಾಗಿ ಶಾಸಕರು, ತಹಸೀಲ್ದಾರ್ ಅವರಿಂದ ಸಭೆ ನಡೆಸಿ ಸ್ಥಳೀಯಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಿದರೂ, ಗ್ರಾಮೀಣ ರಸ್ತೆ ಇಕ್ಕೆಲಗಳ ತೋಡು ಹೂಳೆತ್ತದೆ ನೀರು ರಸ್ತೆಯಲ್ಲಿಯೇ ಹರಿದು ಸಂಚಾರಕ್ಕೆ ತೊಡಕಾಗುತ್ತಿದೆ.

ಮನೆ ಮೇಲೆ ಉರುಳಿದ ಮರ

ಮೂಳೂರು ಬಿಲ್ಲವರ ಸಂಘದ ಮುಂಭಾಗದ ಉದಯ್ ಪೂಜಾರಿ ಎಂಬುವರ ಮನೆಗೆ ಬುಧವಾರ ಬೆಳಗ್ಗೆ ಮರಬಿದ್ದು, ಅಪಾರ ಹಾನಿಯುಂಟಾಗಿದೆ. ಮನೆಯವರು ಹಾಲ್‌ನಲ್ಲಿ ಕುಳಿತಿದ್ದಾಗ ಘಟನೆ ಸಂಭವಿಸಿದ್ದು, ಮನೆಯೊಳಗೆ ಇದ್ದವರಿಗೆ ಯಾವುದೇ ಅಪಾಯಗಳುಂಟಾಗಿಲ್ಲ. ಕಂದಾಯ ಹಾಗೂ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.