ನೆಲ್ಯಾಡಿ: ಮಾದಕ ವ್ಯಸನಮುಕ್ತ ಸಮಾಜ ಕಟ್ಟುವಲ್ಲಿ ನಾವೆಲ್ಲರೂ ಕೈಜೋಡಿಸೋಣ. ವಿದ್ಯಾರ್ಥಿ ದೆಸೆಯಲ್ಲಿಯೇ ಈ ರೀತಿಯ ಸಂಕಲ್ಪವನ್ನು ತೊಟ್ಟಾಗ ಭವಿಷ್ಯದಲ್ಲಿ ಆರೋಗ್ಯವಂತ ಸಮಾಜ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಬೆಥನಿ ವಿದ್ಯಾಸಂಸ್ಥೆಯ ನಿರ್ದೇಶಕ ಜೈಸನ್ ಸೈಮನ್ ಒಐಸಿ ಹೇಳಿದರು.
ಬೆಥನಿ ಐಟಿಐಯ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಸಜಿ ಕೆ.ತೋಮಸ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಷನ್ ಎಚ್, ಉಪಾಧ್ಯಕ್ಷ ಸ್ವಸ್ತಿಕ್, ಜನರಲ್ ಸೆಕ್ರೆಟರಿ ಅಭಿಷೇಕ್, ಸಾಂಸ್ಕೃತಿಕ ಕಾರ್ಯದರ್ಶಿ ಮಹಮ್ಮದ್ ಮಿಜಲಾಜಿ, ಕ್ರೀಡಾ ಕಾರ್ಯದರ್ಶಿ ಪವನ್ ಎಸ್.ಗೆ ಪ್ರಮಾಣವಚನ ಬೋಧಿಸಿದರು.
ಹರಿಪ್ರಸಾದ್ ರೈ ಪರಿಚಯ ನೀಡಿದರು. ತರಬೇತಿ ಅಧಿಕಾರಿ ಜಾನ್ ಪಿ.ಎಸ್. ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ಸುನೀಲ್ ಜೋಸೆಫ್ ಸ್ವಾಗತಿಸಿದರು. ಶಿವಾನಂದ ಎಸ್. ವಂದಿಸಿದರು. ಸಂತೋಷ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.