ಜಿಲ್ಲೆ

ಪಠ್ಯದ ಜತೆ ಕೌಶಲಾಧಾರಿತ ಶಿಕ್ಷಣ ಅವಶ್ಯ : ಡಾ.ಸತೀಶ್ಚಂದ್ರ ಎಸ್.ಹೇಳಿಕೆ

ಸೌಮ್ಯ ಆರ್

ಬೆಳ್ತಂಗಡಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಕೌಶಲಾಧಾರಿತ ಶಿಕ್ಷಣ ಪಡೆಯಬೇಕು. ಈ ಮೂಲಕ ತಮ್ಮ ವ್ಯಕ್ತಿತ್ವ ವೃದ್ಧಿಸಿಕೊಳ್ಳವ ಜತೆಗೆ ಶಿಸ್ತು ಮತ್ತು ಸಂಸ್ಕಾರಯುತ ಶಿಕ್ಷಣದಿಂದ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಹೇಳಿದರು.

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘಗಳ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ.ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಭವಿಷ್ಯದ ಗುರಿಯೊಂದಿಗೆ ಸಾಗಬೇಕು. ಗುರಿಗಳು ಸಾಕಾರಗೊಳ್ಳಲು ನಿರಂತರ ಛಲ ಮತ್ತು ಪರಿಶ್ರಮ ಅಗತ್ಯ ಎಂದರು.

ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ.ಪ್ರತಿಜ್ಞಾ ವಿಧಿ ಬೋಧಿಸಿದರು. ಪತ್ರಿಕೋದ್ಯಮ ವಿಭಾಗದ ಚಿಗುರು ಪ್ರಾಯೋಗಿಕ ಸಂಚಿಕೆ ಎನ್.ಆರ್.ದಾಮೋದರ್ ಶರ್ಮಾ ಬಿಡುಗಡೆಗೊಳಿಸಿದರು. ವಿಭಾಗದ ವಿದ್ಯಾರ್ಥಿಗಳು ರಚಿಸಿದ ಚಿಗುರು ಭಿತ್ತಿಪತ್ರಿಕೆ ಅನಾವರಣಗೊಳಿಸಿದರು.

ದಾಮೋದರ್ ಶರ್ಮಾ ಅವರನ್ನು ಸತೀಶ್ಚಂದ್ರ ಎಸ್.ಗೌರವಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಾ ಪಾಲನಾ ಸಮಿತಿ ಸಂಯೋಜಕ ಶ್ರೇಯಸ್ ಬಿ.ಸ್ವಾಗತಿಸಿ. ಚಂದನ್ ವಂದಿಸಿದರು. ವಿದ್ಯಾರ್ಥಿಗಳಾದ ಧರಿತ್ರಿ ಭಿಡೆ ಮತ್ತು ಜಯ ಸೂರ್ಯ ನಿರೂಪಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೊಳಗೂ ಪ್ರತಿಭಾನ್ವಿತ ಯೋಧನಿದ್ದಾನೆ. ಆ ಯೋಧ ನಾಯಕನಾಗುತ್ತಾನೆ. ನಾಯಕನಾಗಿ ಬೆಳೆದು ನಿಲ್ಲಲು ಶ್ರದ್ಧೆ ಮತ್ತು ಆತ್ಮವಿಶ್ವಾಸ ವಿದ್ಯಾರ್ಥಿ ಜೀವನದಲ್ಲಿ ಅವಶ್ಯ. ನಮ್ಮ ಸುತ್ತಲಿನ ಪರಿಸರದಲ್ಲೇ ಅನೇಕ ಆದರ್ಶ, ಮಾದರಿ ವ್ಯಕ್ತಿತ್ವಗಳಿದ್ದಾರೆ. ಎನ್.ಆರ್.ದಾಮೋದರ್ ಶರ್ಮಾ, ವಾಗ್ಮಿ