ಜಿಲ್ಲೆ

ಸ್ಪರ್ಶ ಸೇವಾ ಕೇಂದ್ರ ಉದ್ಘಾಟನೆ

ಸೌಮ್ಯ ಆರ್

ಕಾಸರಗೋಡು: ಕೇರಳದಲ್ಲಿ 11ನೇ ಸ್ಪರ್ಶ ಸೇವಾ ಕೇಂದ್ರ(ಎಸ್‌ಎಸ್‌ಸಿ)ವನ್ನು ಸೋಮವಾರ ಕಾಸರಗೋಡು ಜಿಲ್ಲೆ ಕಾಞಂಗಾಡ್‌ನಲ್ಲಿ ಚೆನ್ನೈನ ಐಡಿಎಎಸ್ ರಕ್ಷಣಾ ಲೆಕ್ಕಪತ್ರಗಳ ನಿಯಂತ್ರಕ ಟಿ.ಜಯಶೀಲನ್ ಉದ್ಘಾಟಿಸಿದರು.

ಎಸಿಡಿಎ ಆರ್.ನಾರಾಯಣ ಪ್ರಸಾದ್, ಕಣ್ಣೂರಿನ ರಕ್ಷಣಾ ಭದ್ರತಾ ದಳ ಅಧಿಕಾರಿಗಳು, ಕೇರಳ ರಾಜ್ಯ ಮಾಜಿ ಸೇವಾ ಲೀಗ್ ಕಾಸರಗೋಡು ಜಿಲ್ಲಾ ಪದಾಧಿಕಾರಿ, ರಕ್ಷಣಾ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಭಾಗವಹಿಸಿದ್ದರು.

ಸ್ಪರ್ಶ ಎಂಬುದು ರಕ್ಷಣಾ ಪಿಂಚಣಿ ವಿತರಣೆಗಾಗಿ ಪರಿಚಯಿಸಲಾದ ವೆಬ್ ಆಧಾರಿತ ಪಿಂಚಣಿ ವಿತರಣಾ ಮಾಡ್ಯೂಲ್ ಆಗಿದೆ. ಭಾರತದಾದ್ಯಂತ ಇರುವ 32 ಲಕ್ಷ ರಕ್ಷಣಾ ಪಿಂಚಣಿದಾರರು/ರಕ್ಷಣಾ ಕುಟುಂಬ ಪಿಂಚಣಿದಾರರಲ್ಲಿ 90 ಪ್ರತಿಶತ ಜಸನರು ಸ್ಪರ್ಶ್‌ಗೆ ಸ್ಥಳಾಂತರಗೊಂಡಿದ್ದಾರೆ. ಉಳಿದ ಪಿಂಚಣಿದಾರರು ಹಂತ ಹಂತವಾಗಿ ಸ್ಪರ್ಶ್‌ಗೆ ಸೇರ್ಪಡೆಯಾಗುವರು. ಸ್ಪರ್ಶ್ ಸೇವಾ ಕೇಂದ್ರ ವಾರ್ಷಿಕ ಪರಿಶೀಲನೆ, ಪ್ಯಾನ್, ಆಧಾರ್, ಮೊಬೈಲ್ ಸಂಖ್ಯೆ ನವೀಕರಣ, ಪ್ರೊಫೈಲ್ ನವೀಕರಣ, ಕುಟುಂಬ ಪಿಂಚಣಿ ಪ್ರಾರಂಭಿಸುವುದು, ರಕ್ಷಣಾ ಪಿಂಚಣಿಗೆ ಸಂಬಂಧಿಸಿದ ಎಲ್ಲಾ ಸೇವೆ ಒದಗಿಸುತ್ತದೆ.