ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಹೊಲಿಗೆ ತರಬೇತಿ ತರಗತಿ ಉದ್ಘಾಟನೆ, ವಳಾಲು ಮತ್ತು ಬಜತ್ತೂರು ಸ್ವಸಹಾಯ ಸಂಘ ಒಕ್ಕೂಟದ ಸಂಘಗಳ ಲಾಭಾಂಶ ವಿತರಣೆ ಸಮಾರಂಭ ವಳಾಲು ಹಾಲು ಉತ್ಪಾದಕರ ಸಂಘದ ಸಭಾಂಗಣದಲ್ಲಿ ನಡೆಯಿತು.
ಬಜತ್ತೂರು ಗ್ರಾಪಂ ಅಧ್ಯಕ್ಷ ಗಂಗಾಧರ ಗೌಡ ನೆಕ್ಕರಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾರಿ ತೋರಿಸಿ ಕೊಟ್ಟಿದ್ದು, ತನ್ಮೂಲಕ ಬಹಳಷ್ಟು ಮಂದಿ ಬದುಕು ರೂಪಿಸಿಕೊಂಡಿದ್ದಾರೆ. ಯೋಜನೆ ಸೌಲಭ್ಯವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಯೋಜನಾಧಿಕಾರಿ ಶಶಿಧರ್ ಕ್ಷೇತ್ರದಿಂದ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳಾದ ಜ್ಞಾನ ವಿಕಾಸ ಕೇಂದ್ರ ಚಟುವಟಿಕೆ, ಶಿಕ್ಷಣ ಪ್ರಯುಕ್ತ ಎಸ್ಸೆಸ್ಸೆಲ್ಸಿ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್,ರುಡ್‌ಸೆಟ್‌ನಲ್ಲಿ ನಡೆಸಲ್ಪಡುತ್ತಿರುವ ಸ್ವಉದ್ಯೋಗದ ತರಬೇತಿ ಬಗ್ಗೆ ಮಾಹಿತಿ ನೀಡಿದರು. ಉಪ್ಪಿನಂಗಡಿ ಎ.ಎಸ್.ಐ. ಕವಿತಾ, ಉಪ್ಪಿನಂಗಡಿ ವಲಯ ಅಧ್ಯಕ್ಷ ನಾರಾಯಣ, ವಳಾಲು ಒಕ್ಕೂಟ ಅಧ್ಯಕ್ಷ ಮಹೇಂದ್ರ ವರ್ಮ, ವಸಂತ ಗೌಡ ಪಿಜಕ್ಕಳ ಮಾತನಾಡಿದರು.
ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಶಿವಪ್ಪ, ಬಜತ್ತೂರು ತುಳಸಿ ಜ್ಞಾನ ವಿಕಾಸ ಕೇಂದ್ರ ಸಂಯೋಜಕಿ ಮಾಲಿನಿ ಇದ್ದರು. ಜ್ಞಾನ ವಿಕಾಸ ಕೇಂದ್ರ ಸದಸ್ಯೆ ಮಮತಾ ಸ್ವಾಗತಿಸಿ, ಬೇಬಿ ವಂದಿಸಿದರು. ಕಾವ್ಯಶ್ರೀ ಕಾರ‌್ಯಕ್ರಮ ನಿರೂಪಿಸಿದರು.