ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ಅದಾನಿ ಫೌಂಡೇಷನ್ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿದ ರಸ್ತೆಯನ್ನು ಕಿಶೋರ್ ಆಳ್ವ, ಸೌಮ್ಯಲತಾ ಶೆಟ್ಟಿ ಉದ್ಘಾಟಿಸಿದರು.  
ಜಿಲ್ಲೆ

ಪಲಿಮಾರು ರಸ್ತೆ ಕಾಮಗಾರಿ ಲೋಕಾರ್ಪಣೆ

ಇಂದಿರಾ ಎನ್ ಕೆ

ಪಡುಬಿದ್ರಿ: ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಅದಾನಿ ಫೌಂಡೇಶನ್‌ನಿಂದ 1.10 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. 7 ಗ್ರಾಮ ಪಂಚಾಯಿತಿಗಳಿಗೆ ತಲಾ 15ರಿಂದ 20 ಲಕ್ಷ ರೂ.ವರೆಗೆ ಅಭಿವೃದ್ಧಿ ಕೆಲಸಗಳನ್ನು ಆಯಾ ಪಂಚಾಯಿತಿ ನೀಡಿದ ಕ್ರಿಯಾ ಯೋಜನೆಯಂತೆ ಅನುಷ್ಠಾನಗೊಳಿಸಲಾಗುವುದು ಎಂದು ಅದಾನಿ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.

ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ಉಡುಪಿ ಟಿಪಿಪಿ ಸಂಸ್ಥೆ ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗಸಂಸ್ಥೆಯಾದ ಅದಾನಿ ಫೌಂಡೇಷನ್ ಸಿಎಸ್‌ಆರ್ ಅನುದಾನದಲ್ಲಿ ಅನುಷ್ಠಾನಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಸತೀಶ್ ದೇವಾಡಿಗ, ಯೋಗಾನಂದ ಕುಕ್ಯಾನ್, ಜಯಶ್ರೀ ಆಚಾರ್ಯ, ಪ್ರವೀಣ್ ಅಡ್ವೆ, ಶಿವರಾಮ, ಪಿಡಿಒ ಶಶಿಧರ್, ಅದಾನಿ ಸಂಸ್ಥೆ ಏಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಶನ್ ಅನುದೀಪ್, ಧೀರಜ್ ಉಪಸ್ಥಿತರಿದ್ದರು.