ಕಾಸರಗೋಡು : ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎಸ್.ವಿ.ಟಿ.ಫ್ರೆಂಡ್ಸ್ ಮತ್ತು ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ , ಕೆ.ಎನ್.ರಾಮಕೃಷ್ಣ ಹೊಳ್ಳ ಪ್ರಾಯೋಜಕ್ವದಲ್ಲಿ ನಿರ್ಮಿಸಿದ ಅಕ್ಷಯ ಅಗ್ರಶಾಲೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಸ್ವಾಮೀಜಿ ಉದ್ಘಾಟಿಸಿದರು.
ಕ್ಷೇತ್ರದ ಆಡಳಿತ ಸಮಿತಿ ಟ್ರಸ್ಟಿ ಅಧ್ಯಕ್ಷ ಎ.ಗೋವಿಂದನ್ ನಾಯರ್, ಮಲಬಾರ್ ದೇವಸ್ವಂ ಬೋರ್ಡ್ ಅಸಿಸ್ಟೆಂಟ್ ಕಮಿಷನರ್ ಕೆ.ಪಿ.ಪ್ರದೀಪ್ ಕುಮಾರ್, ಕಾಸರಗೋಡು ನಗರಸಭಾ ಸದಸ್ಯೆ ಎ.ಶ್ರೀಲತಾ ಟೀಚರ್, ಬಿಂದು ಜುವೆಲ್ಲರಿ ಮಾಲಕಿ ಶೋಭಾ, ಪಾಲುದಾರರಾದ ಅಭಿಲಾಷ್, ಡಾ.ಅಜಿತೇಶ್, ಧಾರ್ಮಿಕ ಮುಂದಾಳು ಡಾ.ಅನಂತ ಕಾಮತ್, ಅರ್ಜುನನ್ ತಾಯಲಂಗಾಡಿ, ಟ್ರಸ್ಟಿ ಬೋರ್ಡ್ ಸದಸ್ಯೆ ಉಷಾ ಅರ್ಜನನ್, ಸದಸ್ಯರಾದ ಉಮೇಶ್ ಅಣಂಗೂರು, ಮನೋಜ್ ಎ.ಸಿ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಮಹೇಶ್, ಎಸ್‌ವಿಟಿ ಫ್ರೆಂಡ್ಸ್ ಕಾರ್ಯದರ್ಶಿ ಹರೀಶ್ ಕೆ.ಆರ್.ಮೊದಲಾದವರು ಉಪಸ್ಥಿತರಿದ್ದರು.