ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಶಾಸಕರ ನಿಧಿಯಿಂದ ನಿರ್ಮಿಸಿದ ಕಂಚಿಕಟ್ಟೆ ಮಳಿ ಅರಮನೆ ಕಾಂಕ್ರೀಟ್ ರಸ್ತೆಯನ್ನು ಭಾನುವಾರ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು.
ಕುಂಬಳೆ ಗ್ರಾಪಂ ಅಧ್ಯಕ್ಷೆ ತಾಹಿರಾ ಯೂಸಫ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೆಹಮಾನ್ ಅರಿಕ್ಕಾಡಿ, ಸಬೂರ, ವಾರ್ಡು ಸದಸ್ಯೆ ಪ್ರೇಮಾವತಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ, ಸಿಪಿಎಂನ ಹಿರಿಯ ನಾಯಕ ರಾಮಚಂದ್ರ ಗಟ್ಟಿ, ಕಾಂಗ್ರೆಸ್‌ನ ನಾಯಕರಾದ ಲಕ್ಷ್ಮಣ ಪ್ರಭು ಕುಂಬಳೆ, ಸುಂದರ ಅರಿಕ್ಕಾಡಿ, ರವಿ ಪೂಜಾರಿ, ಪೃಥ್ವೀರಾಜ್ ಶೆಟ್ಟಿ, ಡಾಲ್ಫಿ ಡಿಸೋಜ, ವಾರ್ಡ್ ಸಮಿತಿ ಅಧ್ಯಕ್ಷ ಥಾಮಸ್ ರೋಡ್ರಿಗಸ್, ಚಿರಂಜೀವಿ ಕ್ಲಬ್ ಅಧ್ಯಕ್ಷ ಕೃಷ್ಣ ಗಟ್ಟಿ, ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ, ಗುರುವಪ್ಪ, ಫಾರೂಕ್ ಮೊದಲಾದವರಿದ್ದರು. ನಾರಾಯಣ ಪೂಜಾರಿ ಸ್ವಾಗತಿಸಿದರು. ಮುನೀರ್ ಮಳಿ ವಂದಿಸಿದರು.