ಉಪ್ಪಿನಂಗಡಿ: ಗಳಿಸಿದ ಸಂಪತ್ತನ್ನು ಸದ್ವಿನಿಯೋಗಗೊಳಿಸಿ ಬಹುಪಯೋಗಿ ನಾರಾಯಣ ಆರ್ಕೇಡ್ ನಿರ್ಮಿಸುವ ಮೂಲಕ ಊರಿನ ಅಭಿವೃದ್ಧಿಯಲ್ಲಿ ಸಹಕಾರಿಯಾಗಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು. ಸೋಮವಾರ ಉಪ್ಪಿನಂಗಡಿಯಲ್ಲಿ ನಿರ್ಮಾಣವಾಗಿರುವ ನಾರಾಯಣ ಆರ್ಕೇಡ್ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾಕ್ ಮಾತನಾಡಿ, ಚಿನ್ನಾಭರಣ ವ್ಯವಹಾರದಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಜನಪ್ರಿಯವಾಗಿರುವ ಎಂ.ಎಸ್ ನಾರಾಯಣ ಜ್ಯುವೆಲ್ಲರ್ಸ್ ಸಂಸ್ಥೆಯ ಕೊಡುಗೆಯಾಗಿ ನಾರಾಯಣ ಆರ್ಕೇಡ್ ಬಹು ರೂಪದೊಂದಿಗೆ ಲೋಕಾರ್ಪಣೆಗೊಂಡಿರುವುದು ಸಂತಸ ಮೂಡಿಸಿದೆ. ಇದರಿಂದಾಗಿ ಈಗಾಗಲೇ ರಾಜ್ಯ ಹೊರರಾಜ್ಯಗಳಿಂದ ಭಕ್ತರನ್ನು ಸೆಳೆಯುತ್ತಿರುವ ಉಪ್ಪಿನಂಗಡಿಯಲ್ಲಿ ಯಾತ್ರಾರ್ಥಿಗಳಿಗೆ ಉತ್ತಮ ವಸತಿ ವ್ಯವಸ್ಥೆ ಲಭಿಸುವಂತಾಗಿದೆ ಎಂದರು.
ಜಿ.ಎಲ್.ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದರು. ಹಿರಿಯ ವೈದ್ಯ ಡಾ. ಕೆ.ಜಿ ಭಟ್ ಸುಧರ್ಮಾ ಸಭಾಗೃಹಮ್ ಉದ್ಘಾಟಿಸಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಕೂವೆಚ್ಚಾರ್ ಮನೆತನದ ಸುನಂದಾ ನಾರಾಯಣ, ಸುಧನ್ವ ಕೆ.ಎಂ, ಸುಮೇಧ ಕೆ.ಎಂ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲೀಕ ಕೃಷ್ಣ ಎಂ.ಎನ್ ಸ್ವಾಗತಿಸಿದರು. ವಾಣಿ ಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟಿ.ನಾರಾಯಣ ಭಟ್ ನಿರೂಪಿಸಿ, ಮೈತ್ರಿ ಪ್ರಾರ್ಥಿಸಿದರು. ಶ್ರೀಪತಿ ಆಚಾರ್ ವಂದಿಸಿದರು.
ಉದ್ಯಮಿಗಳಾದ ರಾಧಾಕೃಷ್ಣ ಕೂವೆಚ್ಚಾರ್, ಕೃಷ್ಣಮೂರ್ತಿ, ಅನಂತರಾಯ ಕಿಣಿ, ಗೋಪಾಲಕೃಷ್ಣ ಗಾಣದಮೂಲೆ, ಚಂದ್ರಹಾಸ ಶೆಟ್ಟಿ, ಸೇಸಪ್ಪ ರೈ, ಡಾ.ಸುಪ್ರಿತ್ ಲೋಬೊ, ಡಾ.ನಿರಂಜನ್ ರೈ, ಎನ್.ಗೋಪಾಲ ಹೆಗ್ಡೆ, ಸುಂದರ ಗೌಡ, ಕೈಲಾರ್ ರಾಜಗೋಪಾಲ ಭಟ್, ಧನ್ಯಕುಮಾರ್ ರೈ, ಪ್ರಪುಲ್ಲಾ ಜೆ ಶೆಟ್ಟಿ, ರಾಮಕೃಷ್ಣ ಮಲ್ಲಾರ, ವಜ್ರ ಜೈನ್, ನಾರಾಯಣ ಹೇರಳೆ, ಕರುಣಾಕರ ಸುವರ್ಣ, ಡಾ. ಯತೀಶ್ ಶೆಟ್ಟಿ, ಮುರಳೀಧರ್ ಬಳ್ಳಕ್ಕುರಾಯ, ಗುರುರಾಜ ಪಡ್ಡಿಲ್ಲಾಯ, ವಾಸುದೇವ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಸುಂದರ ಸಭಾಂಗಣ, ಅದಕ್ಕೊಪ್ಪುವ ಹವಾನಿಯಂತ್ರಿತ ವಸತಿ ಗೃಹ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಹಲವಾರು ವಾಣಿಜ್ಯ ಮಳಿಗೆಗಳ ವಾಣಿಜ್ಯ ಸಂಕೀರ್ಣವೊಂದು ನಿರ್ಮಾಣವಾಗಿರುವುದು ಊರಿನ ಅಭಿವೃದ್ಧಿಯ ದ್ಯೋತಕವಾಗಿದೆ. ತನ್ಮೂಲಕ ಎಂ.ಎಸ್ ನಾರಾಯಣ ಜ್ಯುವೆಲ್ಲರಿ ಸಂಸ್ಥೆಯ ಸುವರ್ಣ ಮಹೋತ್ಸವವನ್ನು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಸ್ಮರಣೀಯಗೊಳಿಸಿದಂತಾಗಿದೆ. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠಾಧೀಶ
ದಕ್ಷಿಣದ ಚಾರ್‌ಧಾಮ್ ಆಗಲಿ
ಉತ್ತರದ ಚಾರ್‌ಧಾಮ್ ಯಾತ್ರಾ ಸ್ಥಳದಂತೆ ದಕ್ಷಿಣದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಹಾಗೂ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಗಳು ಕೂಡ ಚಾರ್‌ಧಾಮ್‌ನಂತಾಗಬೇಕು. ಅದಕ್ಕಾಗಿ ಪೂರಕ ಯೋಜನೆಗಳು ರೂಪುಗೊಳ್ಳುತ್ತಿರುವಂತೆಯೇ ಯಾತ್ರಾರ್ಥಿಗಳಿಗೆ ಉತ್ತಮವಾದ ವಸತಿ ಸೌಕರ್ಯವನ್ನು ಒಳಗೊಂಡ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಪ್ರಶಂಸನೀಯ. ಸಂಪಾದಿಸಿದ ಹಣವನ್ನು ಉಳಿಸಿ ಬೆಳೆಸುವ ಮೂಲಕ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಕೈ ಜೋಡಿಸಿದಂತಾಗಿದೆ ಎಂದು ಜಿ.ಎಲ್.ಬಲರಾಮ ಆಚಾರ್ಯ ಹೇಳಿದರು.