ಜಿಲ್ಲೆ

2ರಂದು ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಶುಭಾರಂಭ

ಕಡಬ: ಕಣ್ಣಿನ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಹೊಂದಿರುವ ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್ ಕಡಬ ಸರ್ಕಾರಿ ಆಸ್ಪತ್ರೆಯ ಎದುರು ಪಂಜ ರಸ್ತೆಯಲ್ಲಿರುವ ಸಿ.ಎ.ಬ್ಯಾಂಕ್‌ನ ಯೋಗಕ್ಷೇಮ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಮೇ 2ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತ್ರಾಧಿಕಾರಿ ಎಸ್.ಶಾಂತರಾಜ್ ತಿಳಿಸಿದರು.

ಶನಿವಾರ ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಣ್ಣಿನ ಪರೀಕ್ಷೆ ಮತ್ತು ಆಪ್ಟಿಕಲ್ ಕ್ಷೇತ್ರದಲ್ಲಿ 41 ವರ್ಷಗಳ ಸುದೀರ್ಘ ಅನುಭವ ಇರುವ ಆರೋಗ್ಯ ಇಲಾಖೆಯ ನಿವೃತ್ತ ನೇತ್ರಾಧಿಕಾರಿಗಳ ಮೇಲ್ವಿಚಾರಣೆ ಮತ್ತು ಕಾರ್ಯನಿರ್ವಹಣೆಯಲ್ಲಿ ಜನರ ಅನುಕೂಲಕ್ಕಾಗಿ ಕಡಬ ಪೇಟೆಯ ಹೃದಯ ಭಾಗದ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 600 ಚದರಡಿ ವಿಸ್ತೀರ್ಣದ ಸಂಪೂರ್ಣ ಹವಾನಿಯಂತ್ರಿತ ಸುಸಜ್ಜಿತ ಚಿಕಿತ್ಸಾಲಯ ಹಾಗೂ ಆಪ್ಟಿಕಲ್ ವಿಭಾಗ ಕಾರ್ಯನಿರ್ವಹಿಸಲಿದೆ ಎಂದರು.

ಉದ್ಘಾಟನೆ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್‌ನ ಮುಖ್ಯಸ್ಥೆ ಡಾ.ಪಿ.ಗೌರಿ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ವಿ.ಕೆ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ

ನೇತ್ರ ತಜ್ಞರ ಸೇವೆಯೊಂದಿಗೆ ಜಪಾನ್ ನಿರ್ಮಿತ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ, ದೃಷ್ಟಿ ದೋಷಕ್ಕಾಗಿ ಲಾಸಿಕ್ ಸರ್ಜರಿ, ಪೊರೆ ಅಂಧತ್ವ ನಿವಾರಣೆಗಾಗಿ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಕಂಪ್ಯೂಟರೀಕೃತ ಶಸ್ತ್ರಚಿಕಿತ್ಸೆ, ಕಾಂಟಾಕ್ಟ್ ಲೆನ್ಸ್, ನವನವೀನ ಮಾದರಿಯ ಉತ್ತಮ ಗುಣಮಟ್ಟದ ಕನ್ನಡಕಗಳು ಅತ್ಯಂತ ಯೋಗ್ಯ ಮತ್ತು ಕೈಗೆಟುಕುವ ದರದಲ್ಲಿ ಲಭಿಸಲಿವೆ. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸೇವಾ ಸೌಲಭ್ಯವಿದೆ. ನೇತ್ರ ತಜ್ಞ ಡಾ.ಅಶ್ವಿನ್ ಸಾಗರ್ ಹಾಗೂ ಡಾ.ವಿಕಾಸ್ ಚಿಕಿತ್ಸಾಲಯದಲ್ಲಿ ಪ್ರತಿದಿನ ಸೇವೆಗೆ ಲಭ್ಯರಿರುವರು ಎಂದು ಎಸ್.ಶಾಂತರಾಜ್ ವಿವರಿಸಿದರು.