ಸುಳ್ಯ: ಅರಂತೋಡು ಗ್ರಾಪಂ ವ್ಯಾಪ್ತಿಯ ಬಹುಬೇಡಿಕೆಯ ರಸ್ತೆಯಾದ ಅರಂತೋಡು-ಅಂಗಡಿಮಜಲು ರಸ್ತೆ ಸೇರಿದಂತೆ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕಿ ಭಾಗೀರಥಿ ಮುರುಳ್ಯ ಬುಧವಾರ ಉದ್ಘಾಟಿಸಿದರು.
ಅರಂತೋಡು ಗ್ರಾ.ಪಂ ವ್ಯಾಪ್ತಿಯ ಕೊಡಂಕೇರಿ-ಉದಯನಗರ-ಬಂಡಡ್ಕ ರಸ್ತೆ, ಅರಂತೋಡು-ಕಲ್ಲುಗದ್ದೆ ರಸ್ತೆ, ಅರಂತೋಡು-ಅಂಗಡಿಮಜಲು ರಸ್ತೆ-ಆರಂತೋಡು ಬೋಳ್ತಜೆ-ಬನ ರಸ್ತೆ ಮತ್ತು ಪರ್ನೋಜಿ-ಚಾಂಬಾಡು ರಸ್ತೆ ಸೇರಿದಂತೆ ಒಟ್ಟು ಸುಮಾರು 62 ಲಕ್ಷ ರೂ.ಗಳ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗಳನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಜಿ.ಪಂ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ತೊಡಿಕಾನ-ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ತಾ.ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಬಿಜೆಪಿ ಆಲೆಟ್ಟಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಭಾರತಿ ಪುರುಷೋತ್ತಮ ಉಳುವಾರು, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ, ನಿವೃತ್ತ ಶಿಕ್ಷಕ ತೀರ್ಥರಾಮ ಅಡ್ಕಬಳೆ, ಸುಳ್ಯ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಜಿ.ಪಂ ಮಾಜಿ ಸದಸ್ಯ ಸತೀಶ್ ನಾಯ್ಕ, ಶುಂಡ್ಯಡ್ಕ ಗ್ರಾ.ಪಂ ಮಾಜಿ ಅಧ್ಯಕ್ಷೆ ಹರಿಣಿ ದೇರಾಜೆ, ಗ್ರಾ.ಪಂ ಸದಸ್ಯರಾದ ಗಂಗಾಧರ ಬನ, ಪುಷ್ಪರಾಜ್, ಮಾಲಿನಿ ಉಳುವಾರು, ಶಿವಾನಂದ ಕುಕ್ಕುಂಬಳ, ವೇಣುಗೋಪಾಲ ಪೆತ್ತಾಜೆ, ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಶಂಕರಲಿಂಗಂ, ಕೃಷ್ಣಪ್ಪ ಪಾನತ್ತಿಲ, ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಅಡ್ಕಬಳೆ, ವಿನೋದ್ ಉಳುವಾರು, ಶೇಖರ ಜೋಡಿಪಣೆ, ಸಹಕಾರಿ ಸಂಘದ ಮಾಜಿ ನಿರ್ದೇಶಕಿ ವಾರಿಜ ಕುರುಂಜಿ, ವಿಮಲ ಸೇರಿದಂತೆ ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.